alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳು ಪರಿಪರಿಯಾಗಿ ಬೇಡಿಕೊಂಡ್ರೂ ಕತ್ತು ಕತ್ತರಿಸಿದ್ದ ತಂದೆ

ಪಾಪಿ ತಂದೆಯೊಬ್ಬ ಮಗಳು ಹಾಗೂ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಕಳೆದ ಬುಧವಾರ ಆರೋಪಿ ಪತ್ನಿ ಹಾಗೂ ಮಗಳ ಕತ್ತು ಕೊಯ್ದಿದ್ದಾನೆ. ನಂತ್ರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದ್ರೆ ಚಿಕಿತ್ಸೆ ಫಲಕಾರಿಯಾಗಿ ಬದುಕಿ ಬಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಪ್ರಜ್ವಲ್ ಪತ್ನಿ ಸವಿತಾ ಹಾಗೂ ಮಗಳು ಸಿಂಚನಾಳನ್ನು ಕೊಲೆ ಮಾಡಿದ್ದಾನೆ. ಪತ್ನಿ ಹಾಗೂ ಪ್ರಜ್ವಲ್ ಮಧ್ಯೆ ಗಲಾಟೆಯಾಗಿದೆ. ಕೋಪಗೊಂಡ ಪ್ರಜ್ವಲ್ ಪತ್ನಿ ಸವಿತಾ ಕತ್ತು ಕತ್ತರಿಸಿದ್ದಾನೆ. ಈ ವೇಳೆ ಅಜ್ಜನ ಮನೆಯಲ್ಲಿದ್ದ ಮಗಳನ್ನು ಮನೆಗೆ ಕರೆ ತಂದ ಪ್ರಜ್ವಲ್, ನಿನ್ನನ್ನು ಸಾಕಲು ನನ್ನಿಂದ ಸಾಧ್ಯವಿಲ್ಲ. ನಿನ್ನ ಕೊಲೆ ಮಾಡ್ತೇನೆ ಎಂದಿದ್ದಾನೆ. ಮಗಳು ತನ್ನನ್ನು ಕೊಲೆ ಮಾಡಬೇಡ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಆದ್ರೆ ಇದ್ಯಾವುದನ್ನೂ ಲೆಕ್ಕಿಸದ ಪ್ರಜ್ವಲ್ ಮಗಳ ಕತ್ತು ಕತ್ತರಿಸಿದ್ದಾನೆ.

ಬುಧವಾರ ಇಡೀ ರಾತ್ರಿ ಎರಡು ಹೆಣದ ಮಧ್ಯೆ ಕಳೆದ ಪ್ರಜ್ವಲ್ ಗುರುವಾರ ವಿಷದ ಬಾಟಲಿ ತಂದು, ನರ ಕತ್ತರಿಸಿಕೊಂಡು ವಿಷ ಕುಡಿದಿದ್ದಾನೆ. ನಂತ್ರ ತನ್ನ ತಂದೆಗೆ ಕರೆ ಮಾಡಿದ್ದಾನೆ. ಮನೆಗೆ ಬಂದ ಪ್ರಜ್ವಲ್ ತಂದೆ ತಕ್ಷಣ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಒಂದು ವರ್ಷಗಳ ಹಿಂದೆ ಕೆಲಸ ಕಳೆದುಕೊಂಡಿದ್ದ ಪ್ರಜ್ವಲ್ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ. ಕುಡಿತದ ಚಟ ಕಲಿತಿದ್ದ. ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿದ್ದ ಪ್ರಜ್ವಲ್ ಆಕೆ ಹಣ, ಬಂಗಾರ ಕೇಳ್ತಿದ್ದಳು ಎಂದು ದೂರಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...