alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಸೂರು ದಸರಾ: ಗಜಪಡೆ ಕ್ಯಾಪ್ಟನ್ ಅರ್ಜುನನಿಗೆ ಮರಳು ಮೂಟೆ ತಾಲೀಮು ಆರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಆರಂಭವಾಗಿವೆ. ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಗಳಿಗೆ ಇಂದಿನಿಂದ ರಿಹರ್ಸಲ್ ಆರಂಭಿಸಲಾಗಿದೆ.

ಹೌದು. ಅಂಬಾರಿ ಹೊರುವ ಗಜಪಡೆಯ ಕ್ಯಾಪ್ಟನ್ ಅರ್ಜುನನಿಗೆ 350 ಕೆಜಿ ತೂಕದ ಮರಳು ಮೂಟೆಯನ್ನ ಬೆನ್ನಿಗೆ ಕಟ್ಟಿ ಮರಳು ಮೂಟೆ ತಾಲೀಮನ್ನ ಆರಂಭಿಸಲಾಗಿದೆ. ಗಜ ಪಯಣದ ಮೊದಲ ತಂಡದಲ್ಲಿ 6 ಆನೆಗಳು ಅರಮನೆ ಪ್ರವೇಶಿಸಿದ್ದು, ಮರಳು ಮೂಟೆ ತಾಲೀಮನ್ನ ಆರಂಭಿಸಲಾಗಿದೆ. ಮೊದಲ ದಿನವಾದ ಇಂದು 350 ಕೆಜಿ ಮರಳು ಮೂಟೆಯನ್ನ ಬೆನ್ನಿಗೆ ಕಟ್ಟಿ ತಾಲೀಮನ್ನು ನಡೆಸಲಾಯಿತು.

ಅರಮನೆ ಅಂಗಳದಲ್ಲಿ ಗಜ ಪಡೆಗಳಿಗೆ ಹಾಗೂ ಮರಳು ಮೂಟೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಅರ್ಜುನನ ಬೆನ್ನಿಗೆ ಮಾವುತರು ಮರಳಿನ ಮೂಟೆ ಕಟ್ಟಿದರು. ಬಳಿಕ ಆನೆಗಳು ಅರಮನೆಯಿಂದ ತಾಲೀಮು ಆರಂಭಿಸಿ ಬನ್ನಿಮಂಟಪ ತಲುಪಿ ವಾಪಸ್​ ಅರಮನೆಗೆ ಬಂದವು. ನಾಡಹಬ್ಬ ದಸರದಲ್ಲಿ ಗಜ ಪಡೆಗಳ ಕ್ಯಾಪ್ಟನ್​ ಅರ್ಜುನ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಐದು ಕಿಲೋ ಮೀಟರ್ ದೂರ ಸಾಗಲಿದ್ದಾನೆ. ಈ ನಿಟ್ಟಿನಲ್ಲಿ ಅಂಬಾರಿ ಹೊರುವ ಅರ್ಜುನನಿಗೆ ಈಗಿನಿಂದಲೇ ಮರಳು ಮೂಟೆಯ ಭಾರ ಹೊರೆಸಿ ತಾಲೀಮು ನಡೆಸಲಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...