alex Certify Mysore Dasara: ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿದ ದಸರಾ ಆನೆ ಲಕ್ಷ್ಮಿ; 15 ವರ್ಷಗಳ ಬಳಿಕ ಮರುಕಳಿಸಿದ ಅಪರೂಪದ ವಿದ್ಯಾಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Mysore Dasara: ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿದ ದಸರಾ ಆನೆ ಲಕ್ಷ್ಮಿ; 15 ವರ್ಷಗಳ ಬಳಿಕ ಮರುಕಳಿಸಿದ ಅಪರೂಪದ ವಿದ್ಯಾಮಾನ

ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿರುವ 14 ಆನೆಗಳನ್ನು ಈಗಾಗಲೇ ತರಲಾಗಿದ್ದು ಈ ಪೈಕಿ ಮಂಗಳವಾರ ರಾತ್ರಿ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದೆ. 15 ವರ್ಷಗಳ ಹಿಂದೆ ಸರಳ ಎಂಬ ದಸರಾ ಆನೆ ಅರಮನೆ ಆವರಣದಲ್ಲಿ ಮರಿಗೆ ಜನ್ಮ ನೀಡಿದ್ದ ಘಟನೆ ಬಳಿಕ ಇದು ಈ ಬಾರಿ ಮರುಕಳಿಸಿದೆ.

ಪಶು ವೈದ್ಯರ ಸಲಹೆ ಮೇರೆಗೆ ಲಕ್ಷ್ಮಿ ಹಾಗೂ ಅದರ ಮರಿಯನ್ನು ಪ್ರತ್ಯೇಕವಾಗಿ ಇರಿಸಿದ್ದು, ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರ ಓಡಾಟವನ್ನು ಇಲ್ಲಿ ನಿಷೇಧಿಸಲಾಗಿದೆ. ವೈದ್ಯರು ಆನೆ ಮತ್ತು ಅದರ ಮರಿಯ ಆರೋಗ್ಯದ ಕುರಿತು ತೀವ್ರ ನಿಗಾ ಇರಿಸಿದ್ದು, ಎರಡೂ ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಆನೆ ಸರಳಾಗೆ ಮರಿ ಜನಿಸಿದ ವೇಳೆ ಅದಕ್ಕೆ ಚಾಮುಂಡಿ ಎಂದು ಹೆಸರಿಡಲಾಗಿದ್ದು, ಇದೀಗ ಜನಿಸಿರುವ ಲಕ್ಷ್ಮಿಯ ಮರಿಗೆ ಸೂಕ್ತ ಹೆಸರಿನ ತಲಾಶೆಯಲ್ಲಿ ಅರಣ್ಯ ಇಲಾಖೆಯವರು ಇದ್ದಾರೆ.

ಸೆಪ್ಟಂಬರ್ 26ರಿಂದ ದಸರಾ ಉತ್ಸವ ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 5 ರಂದು ದಸರಾ ಸಂಭ್ರಮ ಅಂತ್ಯಗೊಳ್ಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...