alex Certify
ಕನ್ನಡ ದುನಿಯಾ       Mobile App
       

Kannada Duniya

ಮಠದಲ್ಲೇ ಸೀರಿಯಲ್ ನಟಿಯೊಂದಿಗೆ ರಾಸಲೀಲೆ

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಕಾಮಪುರಾಣ ಬಯಲಾಗಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಪ್ರತಿಷ್ಠಿತ ಮಠವೊಂದರಲ್ಲಿ ಸ್ವಾಮೀಜಿಯ ಪುತ್ರ ಮಠದಲ್ಲಿಯೇ ಸೀರಿಯಲ್ ನಟಿಯೊಂದಿಗೆ ಸೆಕ್ಸ್ ಮಾಡಿದ್ದಾನೆ.

ಪ್ರಮುಖ ಸಮುದಾಯಕ್ಕೆ ಸೇರಿದ ಮಠ ಇದಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಮಠಕ್ಕಿದ್ದಾರೆ. ಸ್ವಾಮೀಜಿ ಪುತ್ರನೂ ಮಠದಲ್ಲಿ ಕಿರಿಯ ಸ್ವಾಮೀಜಿಯಾಗಿದ್ದಾನೆ.

ಈತನ ರಾಸಲೀಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದ ಪ್ರಮುಖ ಮಠದ ಹಿರಿಯ ಸ್ವಾಮೀಜಿಗೆ ಮಾಹಿತಿ ನೀಡಿದ್ದಾರೆ.

ಸ್ವಾಮೀಜಿಯ ರಾಸಲೀಲೆ ವಿಡಿಯೋ ವೈರಲ್ ಆಗಿದ್ದು, ಈತನನ್ನು ಪಟ್ಟಕ್ಕೆ ತರಬಾರದೆಂದು ಭಕ್ತರು ಒತ್ತಾಯಿಸಿದ್ದಾರೆ. ಮಠದ ಕೋಣೆಯಲ್ಲಿ ಸ್ವಾಮೀಜಿ ಲೈಂಗಿಕ ಕ್ರಿಯೆ ನಡೆಸಿರುವುದು ಸಮಾಜದವರು ತಲೆ ತಗ್ಗಿಸುವ ವಿಚಾರವಾಗಿದೆ. ಇಂತಹ ಪುತ್ರನನ್ನು ಪಟ್ಟಾಭಿಷೇಕ ಮಾಡಲು ಸ್ವಾಮೀಜಿ ಮುಂದಾಗಿದ್ದು, ಆತನ ರಾಸಲೀಲೆ ಪ್ರಕರಣ ಬಯಲಿಗೆ ಬಂದಿರುವುದರಿಂದ ಆತನನ್ನು ಮಠದಿಂದ ಹೊರಹಾಕಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...