alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ರಮ ಸಂಬಂಧ ಶಂಕೆ: ಪತ್ನಿಯನ್ನು ಕೊಂದು, ರುಂಡವನ್ನು ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಪತಿ

ಚಿಕ್ಕಮಗಳೂರು: ಪತ್ನಿಗೆ ಪರಪುರುಷನೊಂದಿಗೆ ಸಂಬಂಧವಿದೆ ಎಂದು ಅನುಮಾನಗೊಂಡ ಪತಿ ಮಹಾಶಯನೊಬ್ಬ ಪತ್ನಿಯ ತಲೆಯನ್ನೇ ಕಡಿದು, ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿರುವ ಭೀಭತ್ಸ್ಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ರೂಪ (30) ಪತಿಯಿಂದಲೇ ಹತ್ಯೆಯಾದ ಪತ್ನಿ. ತರೀಕೆರೆ ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ಈ ಘಟನೆ ನಡೆದಿದ್ದು, ಪತ್ನಿ ರೂಪಾಗೆ ಅದೇ ಊರಿನ ಸುನೀಲ್ ಎಂಬಾತನ ಜತೆ ಸಂಬಂಧವಿದೆ ಎಂಬ ಶಂಕೆಯ ಮೇರೆಗೆ ಆಕೆಯನ್ನು ಹತ್ಯೆಗೈದ ಪತಿ ಸತೀಶ್, ಶವದ ರುಂಡವನ್ನು ಕತ್ತರಿಸಿ ಬ್ಯಾಗ್ ನಲ್ಲಿರಿಸಿಕೊಂಡು ಬಸ್ ಹತ್ತಿ ಅಜ್ಜಂಪುರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಸತೀಶ್ ಮತ್ತು ರೂಪ ಐದು ವರ್ಷಗಳ ಹಿಂದಷ್ಟೇ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಪತ್ನಿ ರೂಪಾ, ಸುನೀಲ್ ಜತೆ ಅಕ್ರಮ ಸಂಬಂಧ ಹೊಂದಿದ್ದು, ರೆಡ್ ಹ್ಯಾಂಡ್ ಆಗಿ ಪತಿ ಕೈಲಿ ಸಿಕ್ಕಿಬಿದ್ದಿದ್ದಾಳೆ.

ಇದನ್ನು ಕಂಡು ಕೋಪಗೊಂಡ ಸತೀಶ್ ಪತ್ನಿಯನ್ನು ಸಾಯಿಸಿಬಿಟ್ಟಿದ್ದಾನೆ. ಇದೇ ವೇಳೆ ಸುನೀಲ್ ಪರಾರಿಯಾಗಿದ್ದಾನೆ. ಬಳಿಕ ಪತ್ನಿ ತಲೆ ಕತ್ತರಿಸಿ ಕತ್ತಿಯ ಸಮೇತ ಠಾಣೆಗೆ ಬಂದು ಶರಣಾಗಿದ್ದಾನೆ. ಇದೇ ವೇಳೆ ಇನ್ನೊಂದು ಎಚ್ಚರಿಕೆ ನೀಡಿರುವ ಆರೋಪಿ ತನಗೆ ಶಿಕ್ಷೆ ಮುಗಿದು, ಬಿಡುಗಡೆಯಾದ ಬಳಿಕ ಸುನೀಲ್ ನನ್ನು ಹುಡುಕಿಯಾದರೂ ಆತನನ್ನು ಕೊಲೆ ಮಾಡದೆ ಬಿಡೆನು ಎಂಬ ಬೆದರಿಕೆ ಹಾಕಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...