alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಶೀಲ ಶಂಕಿಸಿ ತಲೆ ಮೇಲೆ ಸಿಲಿಂಡರ್ ಎತ್ತಿ ಹಾಕಿದ ಪತಿ

ಪತ್ನಿಯ ಶೀಲ ಶಂಕಿಸಿ ಪತಿಯೋರ್ವ ಆಕೆಯನ್ನು ಹತ್ಯೆ ಮಾಡಿದ ಘಟನೆ ಕಳೆದ ರಾತ್ರಿ ಶಿವಮೊಗ್ಗ ನಗರದ ಬೊಮ್ಮನಕಟ್ಟೆಯ ಸಿ ಬ್ಲಾಕ್ ನ ಚಾಮುಂಡೇಶ್ವರಿ ದೇವಸ್ಥಾನದ ಹಿಂಭಾಗದ ಮನೆಯೊಂದರಲ್ಲಿ ನಡೆದಿದೆ.

ಲತಾ ಎಂಬ ಮಹಿಳೆ ಹತ್ಯೆಯಾಗಿದ್ದು, ಈಕೆಯ ಪತಿ ಮಂಜುನಾಥ್ ತನ್ನ ಪತ್ನಿಯ ಶೀಲ ಶಂಕಿಸಿ ರಾತ್ರಿ ಮಲಗಿದ್ದ ವೇಳೆಯಲ್ಲಿ ಗ್ಯಾಸ್ ಸಿಲೆಂಡರನ್ನು ಪತ್ನಿಯ ತಲೆಯ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಲಕ್ಕವಳ್ಳಿ ಬಳಿಯ ನಿವಾಸಿಯಾದ ಮಂಜುನಾಥ್ ಹಾಗೂ ಲತಾ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಕಳೆದ ಕೆಲವು ವರ್ಷಗಳಿಂದ ಸಾಂಸಾರಿಕ ಭಿನ್ನಾಭಿಪ್ರಾಯಗಳಿಂದ ಪತ್ನಿ ಲತಾ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ ವಾಸವಾಗಿದ್ದಳು ಎನ್ನಲಾಗಿದೆ.

ತನ್ನ ಪತ್ನಿಯ ಬಗ್ಗೆ ಅನೈತಿಕ ಸಂಬಂಧದ ಆರೋಪ ಮಾಡುತ್ತಿದ್ದ ಪತಿ ಮಂಜುನಾಥ್, ನಿನ್ನೆ ರಾತ್ರಿ ಬೊಮ್ಮನಕಟ್ಟೆಯ ಪತ್ನಿಯ ಮನೆಗೆ ಬಂದು ರಾತ್ರಿ ಮಲಗಿದ್ದ ವೇಳೆ ಈ ಕೃತ್ಯವೆಸಗಿದ್ದಾನೆ. ಬಳಿಕ ತಾನೆ ಹೋಗಿ ತುಂಗಾನಗರ ಠಾಣೆಗೆ ಮಾಹಿತಿ ನೀಡಿದ್ದಾನೆ.

ಹತ್ಯೆಯ ಬಳಿಕ ಮಂಜುನಾಥ್ ದೊಡ್ಡಪೇಟೆ ಠಾಣೆಗೆ ತೆರಳಿ ದೂರು ನೀಡಲು ಹೋಗಿದ್ದಾನೆ. ದೂರು ಸ್ವೀಕರಿಸಿದ ಪೊಲೀಸರು ನಂತರ ವಿನೋಬನಗರ ಠಾಣೆಗೆ ಕಳಿಸಿದ್ದಾರೆ. ಪತ್ನಿಗೆ ಅನೈತಿಕ ಸಂಬಂಧವಿರುವುದನ್ನು ದೃಢಪಡಿಸಿಕೊಂಡೇ ತಾನು ಈ ಕೃತ್ಯ ಎಸಗಿರುವುದಾಗಿ ಮಂಜುನಾಥ್ ತಪ್ಪೊಪ್ಪಿಕೊಂಡಿದ್ದಾನೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...