alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಗ್ ನಲ್ಲಿ ಪತ್ತೆಯಾಯ್ತು ಕತ್ತರಿಸಿದ ಕೈ-ಕಾಲು

Murder_title

ಬೆಂಗಳೂರು: ಇಂದು ಬೆಳಿಗ್ಗೆ ಆನೇಕಲ್ ಬಳಿ ಕಂಡು ಬಂದ ದೃಶ್ಯಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ರಸ್ತೆ ಬದಿ ಎಸೆಯಲಾಗಿದ್ದ ಬ್ಯಾಗ್ ಒಂದರಲ್ಲಿ ಕತ್ತರಿಸಿದ ಕೈ- ಕಾಲು ಕಂಡು ಬಂದಿದೆ.

ಹೊಸೂರು ಜಂಕ್ಷನ್ ಬಳಿ ಕಂಡು ಬಂದ ಬ್ಯಾಗ್ ಅನ್ನು ಸ್ಥಳೀಯರು ಸಮೀಪ ಹೋಗಿ ವೀಕ್ಷಿಸಿದಾಗ ಬ್ಯಾಗ್ ನಿಂದ ಹೊರ ಬಂದಿದ್ದ ಕಾಲನ್ನು ಕಂಡು ಅವಾಕ್ಕಾಗಿದ್ದಾರೆ. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ದ್ವೇಷದ ಹಿನ್ನಲೆಯಲ್ಲಿ ಕಳೆದ ರಾತ್ರಿ ಕೊಲೆ ಮಾಡಿ ಬಳಿಕ ಕೈ- ಕಾಲನ್ನು ಕತ್ತರಿಸಿ ಇಲ್ಲಿ ಎಸೆದಿರಬಹುದೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಶ್ವಾನದಳವನ್ನು ಕರೆಸಲಾಗಿದ್ದು, ದೇಹದ ಉಳಿದ ಭಾಗ ಸನಿಹದಲ್ಲೇ ಇರಬಹುದೆಂಬ ಶಂಕೆಯ ಹಿನ್ನಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ತಪಾಸಣೆ ನಡೆಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...