alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯಿಂದ ಪತಿ ಹತ್ಯೆ

ಬಳ್ಳಾರಿ: ಆಪ್ತ ಸ್ನೇಹಿತನ ಪತ್ನಿಯೊಂದಿಗೆ ಲವ್ವಿಡವ್ವಿ ಪ್ರಾರಂಬಿಸಿ, ತಮ್ಮ ಅಕ್ರಮ ಸಂಬಂಧದ ಬಗ್ಗೆ ಸ್ನೇಹಿತನಿಗೆ ತಿಳಿಯುತ್ತಿದ್ದಂತೆಯೇ ಪ್ರೇಯಸಿಯೊಡಗೂಡಿ ಸ್ನೇಹಿತನನ್ನೇ ಹತ್ಯೆಗೈದ ದಾರುಣ ಘಟನೆ ಬಳ್ಳಾರಿಯ ಖಾನಾಹೊಸಹಳ್ಳಿಯಲ್ಲಿ ನಡೆದಿದೆ.

ಮಹ್ಮದ್ ಫಯಾಜ್ ಕೊಲೆಯಾದ ವ್ಯಕ್ತಿ. ಮಹಮ್ಮದ್ ಫಯಾಜ್ ಹಾಗೂ ನೂರುಲ್ಲಾ ಇಬ್ಬರೂ ಆಪ್ತ ಸ್ನೇಹಿತರಾಗಿದ್ದವರು. ಮಹಮ್ಮದ್ ಫಯಾಜ್ ಪತ್ನಿ ಫಮೀದಾ ಕಿರಾಣಿ ಅಂಗಡಿ ನಡೆಸುತ್ತಿದ್ದಳು. ನೂರುಲ್ಲಾ ಪದೇ ಪದೇ ಸ್ನೇಹಿತ ಮಹಮ್ಮದ್ ಮನೆಗೆ ಬರುವುದು ಹಾಗೂ ಆತನ ಪತ್ನಿ ನಡೆಸುತ್ತಿದ್ದ ಅಂಗಡಿಗೆ ಹೋಗುವುದು ವಾಡಿಕೆಯಾಗಿತ್ತು. ಹೀಗೆ ಆರಂಭವಾದ ಮಹಮ್ಮದ್ ಪತ್ನಿ ಜೊತೆಗಿನ ಸ್ನೇಹ ಬಳಿಕ ಅಕ್ರಮ ಸಂಬಂಧಕ್ಕೆ ತಿರುಗಿದೆ.

ಕಳೆದ ಎರಡು ವರ್ಷಗಳಿಂದ ನೂರುಲ್ಲಾ ಹಾಗೂ ಫಮೀದಾ ಅಕ್ರಮ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಈ ವಿಷಯ ಮಹಮ್ಮದ್ ಫಯಾಜ್ ಗೆ ಗೊತ್ತಾಗಿದೆ. ವಿಷಯ ಮಹಮ್ಮದ್ ಗೆ ಗೊತ್ತಾಗುತ್ತಿದ್ದಂತೆಯೇ ನೂರುಲ್ಲಾ ಹಾಗೂ ಮಹಮ್ಮದ್ ಪತ್ನಿ ಫಮೀದಾ ಸೇರಿ ನೀರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಮಹಮ್ಮದ್ ಗೆ ಕೊಟ್ಟಿದ್ದಾರೆ. ಆತ ನಿದ್ದೆ ಮಂಪರಿನಲ್ಲಿದ್ದಾಗ ಆತನನ್ನು ಹೊಡೆದು ಹತ್ಯೆಮಾಡಿದ್ದಾರೆ. ಬಳಿಕ ಆತನ ಶವವನ್ನು ಕಾರಿನಲ್ಲಿಟ್ಟು ಹೊಸಪೇಟೆ- ಬೆಂಗಳೂರು ಹೆದ್ದಾರಿ ಮಧ್ಯೆ ಕಾರನ್ನ ನಿಲ್ಲಿಸಿ ಯಾರೋ ಕೊಲೆ ಮಾಡಿದ್ದಾರೆ ಎಂಬ ರೀತಿ ಬಿಂಬಿಸಲು ಹೋಗಿದ್ದಾರೆ.

ಅನುಮಾನಗೊಂಡ ಖಾನಾಹೊಸಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆ ರಹಸ್ಯ ಬಯಲಾಗಿದೆ. ಲೈನ್ ಮೆನ್ ಆಗಿರುವ ನೂರುಲ್ಲಾಗೆ ಆಗಲೇ ಮದುವೆಯಾಗಿದ್ದು, 8 ಮಕ್ಕಳಿದ್ದಾರೆ. ಇನ್ನು ಫಮೀದಾ ಕೂಡ ಎರಡು ಮಕ್ಕಳ ತಾಯಿಯಾಗಿದ್ದಾರೆ. ಪ್ರಕರಣ ಬೇಧಿಸಿರುವ ಪೊಲೀಸರು ಈಗ ಕೊಲೆ ಪಾತಕರಿಬ್ಬರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...