alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ನಡೆದಿತ್ತು ಭೀಕರ ಹತ್ಯೆ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಕಾರಿನ ಚಾಲಕನನ್ನು ಚಾಕುವಿನಿಂದ ಇರಿದು ಕೊಂದು ಬಳಿಕ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ನದೀಮ್ ಮತ್ತು ಫಯಾಜ್ ಬಂಧಿತ ಆರೋಪಿಗಳು. ಆ.24 ರಂದು ರಾತ್ರಿ ಕದಿರೇನಹಳ್ಳಿ ಬಳಿಯ ಕೆ.ಆರ್. ಬಾರ್ ಬಳಿ ಕಾರ್ ಡ್ರೈವರ್ ಚಂದ್ರು ಎಂಬುವವರು ಸಿಗರೇಟು ಸೇದುತ್ತಿದ್ದರು. ಈ ವೇಳೆ ಸಿಗರೇಟಿನ ಕಿಡಿ ಆಕಸ್ಮಾತ್ ಆಗಿ ನದೀಮ್ ಕೈ ಮೇಲೆ ಬಿದ್ದಿದೆ. ಇದೇ ಕಾರಣಕ್ಕೆ ಆರಂಭವಾದ ಜಗಳ ಮಾತಿನ ಚಕಮಕಿ ಉಂಟಾಗಿ ನದೀಮ್ ಹಾಗೂ ಆತನ ಮೂವರು ಸ್ನೇಹಿತರು ಚಾಕುವಿನಿಂದ ಚಂದ್ರುಗೆ ತಿವಿದು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದ ಚಂದ್ರು ಸಾವನ್ನಪ್ಪಿದ್ದರು.

ನಾಲ್ವರು ಆರೋಪಿಗಳು ಕೊಲೆ ಬಳಿಕ ಮಂಡ್ಯಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದು, ಬೈಕ್ ಸುಳಿವಿನ ಮೇರೆಗೆ ಈಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...