alex Certify
ಕನ್ನಡ ದುನಿಯಾ       Mobile App
       

Kannada Duniya

500 ರೂಪಾಯಿಗಾಗಿ ನಡೆಯಿತು ಸ್ನೇಹಿತನ ಕೊಲೆ

Murder

ಕೆಲವರು ಕುಡಿದ ಅಮಲಿನಲ್ಲಿ ಏನು ಮಾಡುತ್ತಾರೆ ಎನ್ನಲೂ ಸಾಧ್ಯವಿಲ್ಲ. ಕುಡಿದ ಸಮಯದಲ್ಲಿ ಹೊಟ್ಟೆಯೊಳಗಿನ ‘ಪರಮಾತ್ಮ’ ಆಡಿಸಿದಂತೆ ಆಡುವ ಇವರು ತಾವೇನು ಮಾಡುತ್ತಿದ್ದೇವೆ ಎಂಬ ಅರಿವನ್ನೇ ಕಳೆದುಕೊಂಡಿರುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಕೇವಲ 500 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.

ಹೌದು, ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಚಿಕ್ಕ ಲಾಲ್ ​ಬಾಗ್ ​ನ ತುಳಸಿ ಪಾರ್ಕ್​ನಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಜಗಳ ಆರಂಭವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಗಿರೀಶ್ ಹಾಗೂ ಮದನ್ ಸ್ನೇಹಿತರಾಗಿದ್ದು, ನಗರ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮದನ್​ ಗೆಳತಿ ದಯಾನಿಧಿ ಎಂಬಾಕೆಗೆ ಗಿರೀಶ್ 500 ರೂ. ಸಾಲ ಕೊಟ್ಟಿದ್ದು, ಈ ಹಣವನ್ನು ಆಕೆ ವಾಪಸ್ ನೀಡಿರಲಿಲ್ಲ. ಸೋಮವಾರ ಮಧ್ಯಾಹ್ನ ಇಬ್ಬರೂ ಕುಡಿದ ಅಮಲಿನಲ್ಲಿ ಪಾರ್ಕ್ ​ಗೆ ಬಂದಿದ್ದು ಅದೇ ಸಮಯದಲ್ಲಿ ಹಣ ಪಡೆದಿದ್ದ ದಯಾನಿಧಿ ಸಹ ಬಂದಿದ್ದಳು. ಈ ವೇಳೆ ಗಿರೀಶ್ ತನ್ನ ಹಣ ನೀಡುವಂತೆ ದಯಾನಿಧಿಯಲ್ಲಿ ಕೇಳಿದ್ದು, ಇದರಿಂದ ಕೆರಳಿದ ಮದನ್, ಜಗಳವಾಡಿ ಚಾಕುವಿನಿಂದ ಗಿರೀಶ್ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈಕೆ ಕೊಟ್ಟ ಮಾಹಿತಿ ಮೇರೆಗೆ ರೈಲು ನಿಲ್ದಾಣದಲ್ಲಿ ಮದನ್ ​ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...