alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಗಂಡು ಮಕ್ಕಳಿಲ್ಲ ಎಂಬ ಕಾರಣಕ್ಕೆ ತಂಗಿ ಮಗನನ್ನೇ ಹತ್ಯೆಗೈದ ಮಹಿಳೆ

ಚಿಕ್ಕೋಡಿ: ತನಗೆ ಗಂಡು ಮಕ್ಕಳಿಲ್ಲ ಎಂಬ ಕಾರಣಕ್ಕೆ ತಂಗಿಯ ಮಗನನ್ನೇ ಹತ್ಯೆಗೈದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಶೇಡಬಾಳ ಗ್ರಾಮದಲ್ಲಿ ನಡೆದಿದೆ.

ಜಯಶ್ರೀ ಅಲಾಸೆ ಎಂಬ ಧೂರ್ತ ಮಹಿಳೆ ತನಗೆ ಗಂಡು ಮಕ್ಕಳಿಲ್ಲ ಎಂಬ ಕಾರಣಕ್ಕೆ ಸ್ವಂತ ತಂಗಿಯ ಮಗುವನ್ನು ನೀರು ತುಂಬಿದ್ದ ಬ್ಯಾರಲ್‍ನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಕಾರ್ತಿಕ್ ಅಲಾಸೆ (2) ಹತ್ಯೆಗೀಡಾದ ಮಗು.

ಜಯಶ್ರಿಗೆ ಎರಡು ಹೆಣ್ಣು ಮಕ್ಕಳಿದ್ದು, ಆಕೆಯ ತಂಗಿಗೆ ಮೊದಲನೆಯದೇ ಗಂಡು ಮಗುವಾಗಿತ್ತು. ಇದನ್ನು ಸಹಿಸಲಾರದ ಜಯಶ್ರೀ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯವೆಸಗಿದ್ದಾಳೆ. ಬಳಿಕ ಮನೆಯಲ್ಲಿದ್ದ ನಗದು-ನಾಣ್ಯ, ಒಡವೆಗಳನ್ನು ಹೊತ್ತು ಪರಾರಿಯಾಗಿದ್ದಾಳೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಿಳೆಗಾಗಿ ಶೋಧ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...