alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರೂಪದ ಸಾಧನೆ ಮಾಡಿದ ಕೊಡಗಿನ ಯುವತಿ

ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಹೇರೂರು ಗ್ರಾಮದ ಭವಾನಿ ಎಂಬ ಯುವತಿ, ರಷ್ಯಾದ ಅತಿ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತದ ತುತ್ತ ತುದಿಗೆ ಏರುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

ತೆಕ್ಕಡ ನಂಜುಂಡ ಹಾಗೂ ಪಾರ್ವತಿ ದಂಪತಿಯ ಪುತ್ರಿ ಭವಾನಿಯವರು ಪ್ರಸ್ತುತ ಹಿಮಾಲಯದ ಮೌಂಟೇನೇರಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೌಂಟ್ ಎಲ್ಬ್ರಸ್ ಪರ್ವತ ಏರಲು ಭಾರತವನ್ನು ಪ್ರತಿನಿಧಿಸಿದ್ದರು.

ಇವರ ತಂಡದಲ್ಲಿ ಮೂವರು ವಿದೇಶಿಗರೂ ಇದ್ದು, ಅತಿ ವೇಗವಾಗಿ ಏರಿದ ಭಾರತದ ಯುವತಿ ಎಂಬ ಹೆಗ್ಗಳಿಕೆಗೆ ಭವಾನಿ ಪಾತ್ರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮೌಂಟ್ ಎವರೆಸ್ಟ್ ಏರುವ ಬಯಕೆ ಹೊಂದಿರುವ ಭವಾನಿ, ಇದಕ್ಕಾಗಿ ಸೂಕ್ತ ತರಬೇತಿ ಪಡೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...