alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನಗಳ ಮೇಲೆ ರಾರಾಜಿಸುತ್ತಿದೆ ಹನುಮಾನ್ ಸ್ಟಿಕ್ಕರ್

motorists-in-bengaluru-are-going-crazy-over-this-hanuman-stickerಬಹುತೇಕರು ತಮ್ಮ ವಾಹನಗಳ ಮೇಲೆ ಸ್ಟಿಕ್ಕರ್ ಗಳನ್ನು ಹಾಕಿಸುತ್ತಾರೆ. ಕೆಲವೊಂದು ಸ್ಟಿಕ್ಕರ್ ಗಳಲ್ಲಿ ಗಮನ ಸೆಳೆಯುವ ಬರಹವಿದ್ದರೆ ಮತ್ತೆ ಹಲವು ಸ್ಟಿಕ್ಕರ್ ಗಳು ದೇವರದ್ದಾಗಿರುತ್ತದೆ.

ಸದ್ಯ ಟ್ರೆಂಡಿಂಗ್ ನಲ್ಲಿರುವುದು ಹನುಮಾನ್ ಸ್ಟಿಕ್ಕರ್. ಈ ಸ್ಟಿಕ್ಕರ್ ನ್ನು ಬಹಳಷ್ಟು ಮಂದಿ ತಮ್ಮ ವಾಹನಗಳಿಗೆ ಹಾಕಿಕೊಂಡಿದ್ದಾರೆ. ಸ್ಟಿಕ್ಕರ್ ನಲ್ಲಿರುವ ಈ ಚಿತ್ರ ರೂಪುಗೊಂಡಿರುವ ಹಿಂದೆಯೂ ಒಂದು ಇಂಟ್ರೆಸ್ಟಿಂಗ್ ಸಂಗತಿಯಿದೆ.

ಹನುಮಂತನ ಈ ಚಿತ್ರ ರಚಿಸಿದ್ದು, ಕಾಸರಗೋಡಿನ ಕುಂಬ್ಳೆಯ ಆಚಾರ್ಯ ಎಂಬ ಗ್ರಾಫಿಕ್ ಡಿಸೈನರ್. ತಮ್ಮ ಊರಿನ ಗಣೇಶೋತ್ಸವ ಸಂದರ್ಭದಲ್ಲಿ ಬಾವುಟದ ಮೇಲೆ ವಿಭಿನ್ನವಾಗಿ ಕಾಣಬೇಕೆಂಬ ಕಾರಣಕ್ಕೆ ಆಚಾರ್ಯ ಈ ಚಿತ್ರವನ್ನು 2015 ರಲ್ಲಿ ರಚಿಸಿದ್ದರು. ತಾವು ರಚಿಸಿದ್ದ ಚಿತ್ರ ಇಷ್ಟು ಪ್ರಸಿದ್ದಿಯಾಗಿದ್ದರೂ ಆಚಾರ್ಯರಿಗೆ ಕಾಪಿ ರೈಟ್ ಪಡೆಯುವ ಯಾವುದೇ ಇರಾದೆಯಿಲ್ಲ. ಈ ಚಿತ್ರವಿಂದು ಸ್ಟಿಕ್ಕರ್ ಆಗಿ ಬಹುತೇಕ ವಾಹನಗಳ ಮೇಲೆ ರಾರಾಜಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...