alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯವಿದ್ರಾವಕ ಘಟನೆ, ಮಗನ ಸಾವಿನಲ್ಲಿ ಒಂದಾದ ಅಮ್ಮ

mother child 123

ಕೊಪ್ಪಳ: ಅಮ್ಮನ ಪ್ರೀತಿಗೆ ಸಾಟಿಯಿಲ್ಲ, ಮಕ್ಕಳಿಗೇನಾದರೂ ಆದರೆ ಅಮ್ಮನ ಹೃದಯ ಮಿಡಿಯುತ್ತದೆ. ಇದಕ್ಕೆ ಅತ್ಯುತ್ತಮ ನಿದರ್ಶನ ಎನ್ನಬಹುದಾದ ಘಟನೆಯೊಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಮಗನ ಸಾವಿನ ನೋವನ್ನು ತಡೆಯದೇ ತಾಯಿಯೂ ಸಾವನ್ನಪ್ಪಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ನಾಗಪ್ಪ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಸಾವಿನ ಸುದ್ದಿ ಕೇಳಿದ ಮರು ಗಳಿಗೆಯಲ್ಲೇ ತಾಯಿ ಅಂಬರಮ್ಮ ಅವರೂ ಮೃತಪಟ್ಟಿದ್ದಾರೆ. ಅಮ್ಮ- ಮಗನ ಸಾವಿಗೆ ಊರಿಗೇ ಊರೇ ಕಂಬನಿ ಮಿಡಿದಿದೆ. ಅಂಬರಮ್ಮ ಅವರಿಗೆ ಐವರು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳು ಇದ್ದು, ಎಲ್ಲರಿಗೂ ಮದುವೆಯಾಗಿದೆ. ಅಂಬರಮ್ಮ ಅವರು ಹಿರಿಯ ಪುತ್ರನಾದ ನಾಗಪ್ಪ ಅವರೊಂದಿಗೆ ವಾಸವಾಗಿದ್ದರು.

ನಾಗಪ್ಪನವರಿಗೆ ತೀವ್ರ ಹೃದಯಾಘಾತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲೇ ಮೃತಪಟ್ಟಿದ್ದಾರೆ. ಅವರು ಮೃತಪಟ್ಟ ವಿಷಯ ತಿಳಿದ ಅಂಬರಮ್ಮನವರು ಕೂಡ ಮೃತಪಟ್ಟಿದ್ದಾರೆ. ಇವರ ನಿಧನದಿಂದ ಕುಟುಂಬದವರು ಮಾತ್ರವಲ್ಲದೇ, ಊರಿನ ಜನರಲ್ಲಿ ದುಃಖ ಮಡುಗಟ್ಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...