alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತೆಯನ್ನು ರಸ್ತೆಗೆ ಎಳೆದು ತಂದು ಹಿಗ್ಗಾಮುಗ್ಗಾ ಥಳಿಸಿದ ಅಳಿಯ

ಬೆಂಗಳೂರು: ಅಳಿಯನೊಬ್ಬ ಹೆಣ್ಣುಕೊಟ್ಟ ಅತ್ತೆಯನ್ನು ರಸ್ತೆಗೆ ಎಳೆದು ತಂದು ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬ್ಯಾಟರಾಯನಪುರದ ಬಳಿ ನಡೆದ ಈ ಘಟನೆ, ಮನೆ ಮುಂದಿರುವ ಸಿಸಿ ಟಿವಿ ಕ್ಯಾಮರಾ ಒಂದರಲ್ಲಿ ಸೆರೆಯಾಗಿದ್ದು, ಈಗ ಅಳಿಯನ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಲ್ಲಿನ ಲಿಂಗರತ್ನಮ್ಮ ಎಂಬುವವರ ಮಗಳು ಅನಿತಾರನ್ನು ಬಾಬು ಎಂಬಾತ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದ. ಹಣಕ್ಕಾಗಿ ಆಗಾಗ ಪತ್ನಿಯನ್ನು ಪೀಡಿಸುತ್ತಲೇ ಇದ್ದ. ಇತ್ತೀಚೆಗೂ ಕೂಡ ಪತ್ನಿ ಅನಿತಾಳನ್ನು ಹಣಕ್ಕಾಗಿ ಪೀಡಿಸಿ, ತವರು ಮನೆಗೆ ಅಟ್ಟಿದ್ದ.

ಪತಿ ಕಿರುಕುಳಕ್ಕೆ ಬೇಸತ್ತ ಪತ್ನಿ ಅನಿತಾ, ತವರಿಗೆ ಬಂದವಳು ವಾಪಸ್ ಮನೆಗೆ ಹೋಗಿರಲಿಲ್ಲ. ಇದರಿಂದ ಕುಪಿತಗೊಂಡ ಅನಿತಾ ಪತಿ ಬಾಬು, ಪತ್ನಿ ತವರು ಮನೆಗೆ ಬಂದು ಅನಿತಾ ತಾಯಿಯ ಜತೆ ಜಗಳವಾಡಿ, ರಸ್ತೆಗೆ ಕರೆ ತಂದಿದ್ದಾನೆ. ಮಾತಿಗೆ ಮಾತು ಆರಂಭವಾಗಿ ಕೋಪಗೊಂಡ ಅಳಿಯ ಬಾಬು, ಅತ್ತೆಯ ಮೇಲೆ ಕೈ ಮಾಡಿದ್ದಲ್ಲದೇ ನಡು ರಸ್ತೆಯಲ್ಲೇ ಥಳಿಸಲು ಆರಂಭಿಸಿದ್ದಾನೆ. ಇದನ್ನು ಕಂಡ ಅಕ್ಕಪಕ್ಕದವರು ಸ್ಥಳಕ್ಕೆ ದೌಡಾಯಿಸಿ, ಅಳಿಯನನ್ನು ತಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...