alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯ 100 ನೇ ಹುಟ್ಟುಹಬ್ಬದ ವೇಳೆಯೇ ಮೃತಪಟ್ಟ ಮಗಳು

ಮಂಗಳೂರು: ತಾಯಿಯ 100 ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಪುತ್ರಿ, ಹಠಾತ್ ನಿಧನರಾದ ಘಟನೆ ಪಾಂಡೇಶ್ವರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೆನಡಾದಲ್ಲಿ ನೆಲೆಸಿರುವ ಗ್ಲೋರಿಯಾ ಲೋಬೋ(75) ಮೃತಪಟ್ಟವರು. ತನ್ನ ತಾಯಿ ಪಾಂಡೇಶ್ವರದ ಗ್ಲಾಡಿಯೊ ಡಿಸೋಜ ಅವರ 100 ನೇ ಜನ್ಮ ದಿನದ ಸಂಭ್ರಮದಲ್ಲಿ ಪಾಲ್ಗೊಳ್ಳಲು 2 ವಾರಗಳ ಹಿಂದೆ ಅವರು ಆಗಮಿಸಿದ್ದಾರೆ.

ಮಾರ್ಚ್ 30 ರಂದು ಪಾಂಡೇಶ್ವರದ ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಸಂಭ್ರಮಾಚರಣೆಯ ವೇಳೆ ಅಮ್ಮನಿಗಾಗಿ ಬರೆದಿದ್ದ ವಿಶೇಷ ಕವನವನ್ನು ವಾಚಿಸಿದ ಗ್ಲೋರಿಯಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಸಂಭ್ರಮ ಮರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...