alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬಿದ್ರು ಅಡಿಕೆ ತೋಟದಲ್ಲಿದ್ದ ಕಾರ್ಮಿಕರು..!

ಉಡುಪಿ: ಬರೋಬ್ಬರಿ 14 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವೊಂದು, ಕೋತಿಯನ್ನು ಹಿಡಿಯಾಗಿ ನುಂಗಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಅಡಿಕೆ ತೋಟದಲ್ಲಿ ದೊಡ್ಡ ಕೋತಿಯೊಂದನ್ನು ಹೆಬ್ಬಾವು ಕಚ್ಚಿ ಹಿಡಿದಿದೆ. ಮರದಲ್ಲಿದ್ದ ಕೋತಿಗಳೆಲ್ಲಾ ಚೀರಾಡಿದ್ದನ್ನು ಗಮನಿಸಿದ ಕಾರ್ಮಿಕರು ಹತ್ತಿರಕ್ಕೆ ಹೋಗಿ ನೋಡಿದ್ದಾರೆ.

ನೋಡ ನೋಡುತ್ತಿದ್ದಂತೆ ಹೆಬ್ಬಾವು ಕೋತಿಯನ್ನು ನುಂಗಿ ಅಲ್ಲೇ ಪೊದೆಯಲ್ಲಿ ಮರೆಯಾಗಿದೆ. ಹೆಬ್ಬಾವು ದೊಡ್ಡ ಪ್ರಾಣಿಗಳನ್ನು ನುಂಗಿದಾಗ ಮೈ ಭಾರವಾಗುವುದರಿಂದ ಸ್ಥಳದಿಂದ ಕದಲುವುದಿಲ್ಲ. ಕೆಲ ಸಮಯದ ಬಳಿಕ ಅಲ್ಲಿಂದ ತೆರಳುತ್ತವೆ.

ನಿಟ್ಟೆ ಕಾಲೇಜಿನ ಪ್ರಾಂಶುಪಾಲ ನಿರಂಜನ್ ಎಂಬುವವರಿಗೆ ಸೇರಿದ ಅಡಿಕೆ ತೋಟ ಇದಾಗಿದ್ದು, ಪಶ್ಚಿಮ ಘಟಕ್ಕೆ ಹೊಂದಿಕೊಂಡಿದೆ.

ಘಟ್ಟದ ಕಾಡಿನಿಂದ ಹೆಬ್ಬಾವು ತೋಟಕ್ಕೆ ಬಂದು ಮರದಲ್ಲಿದ್ದ ದೊಡ್ಡ ಕೋತಿಯನ್ನು ನುಂಗಿದ್ದು, ಇದನ್ನು ಕಂಡ ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...