alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಕೊಡದಿದ್ದರೆ, ಸರಸಕ್ಕೆ ಸಹಕರಿಸು ಎಂದ ಅಧಿಕಾರಿ

lady nm

ಮಂಡ್ಯ: ಮಹಿಳೆಯೊಬ್ಬರಿಗೆ ಹಣ ಕೊಡುವಂತೆ ಪೀಡಿಸಿದ ಅಧಿಕಾರಿಯೊಬ್ಬ, ಹಣ ಇಲ್ಲದಿದ್ದರೆ, ಸರಸಕ್ಕೆ ಸಹಕಾರ ನೀಡುವಂತೆ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ.

ಹೇಮಾವತಿ ಜಲಾಶಯ ಯೋಜನೆಯ ವಸತಿಗೃಹದಲ್ಲಿ ವಾಸವಿದ್ದ ಮಹಿಳೆಯೊಬ್ಬರು, ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಬಂದ ಯೋಜನೆಯ ಅಧಿಕಾರಿ, ಈ ಮನೆಯಲ್ಲಿರಲು ಹೆಚ್ಚು ಹಣ ಕೊಡಬೇಕು. ಇಲ್ಲದಿದ್ದರೆ ಲೈಂಗಿಕ ಸುಖ ನೀಡಬೇಕೆಂದು ಒತ್ತಾಯಿಸಿದ್ದಲ್ಲದೇ, ಕೈ ಹಿಡಿದು ಎಳೆದಾಡಿದ್ದಾನೆ. ಆಕೆ ಒಪ್ಪದಿದ್ದಾಗೆ ಮನೆಗೆ ಹೊರಗಿನಿಂದ ಬೀಗ ಹಾಕಿಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಇದರಿಂದ ಆಕೆ ರಾತ್ರಿಯಿಡಿ ಗೃಹಬಂಧನದಲ್ಲಿದ್ದರು ಎಂದು ಹೇಳಲಾಗಿದೆ.

ಈ ಆರೋಪವನ್ನು ಅಲ್ಲಗಳೆದಿರುವ ಅಧಿಕಾರಿ, ಬೇರೆ ಮನೆಯಲ್ಲಿ ವಾಸವಾಗಿದ್ದ ಅಂಗನವಾಡಿ ಕಾರ್ಯಕರ್ತೆ ಹೇಳದೆ, ಕೇಳದೇ, ಈ ಮನೆಗೆ ಪ್ರವೇಶಿಸಿದ್ದಾರೆ. ಅನುಮತಿ ಪಡೆದು ಬರುವಂತೆ ಹೇಳಿದ್ದಕ್ಕೆ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...