alex Certify
ಕನ್ನಡ ದುನಿಯಾ       Mobile App
       

Kannada Duniya

ಬೌರಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಪತ್ತೆಯಾಯ್ತು ಕೋಟಿ ಕೋಟಿ ಹಣ?

ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಎರಡು ಬ್ಯಾಗ್ ಗಳಲ್ಲಿ ತುಂಬಿಟ್ಟಿದ್ದ ಕೋಟ್ಯಾಂತರ ರೂಪಾಯಿ ಹಣ ವಜ್ರಾಭರಣ ಪತ್ತೆಯಾಗಿದೆ ಎನ್ನಲಾಗಿದ್ದು, ಇದು ಕುತೂಹಲ ಮೂಡಿಸಿದೆ.

ಉದ್ಯಮಿಯೊಬ್ಬರು ತಾವು ಹೊಂದಿದ್ದ ಲಾಕರ್ ನಲ್ಲಿ ಈ ಬ್ಯಾಗ್ ಗಳನ್ನು ಇಟ್ಟಿದ್ದರೆನ್ನಲಾಗಿದ್ದು, ಬಹಳಷ್ಟು ಕಾಲವಾದರೂ ಲಾಕರ್ ತೆರೆಯದ ಕಾರಣ ನೋಟಿಸ್ ನೀಡಿ ಯಾರೂ ಬಾರದ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಲಾಕರ್ ಒಡೆದ ವೇಳೆ ಹಣ ಹಾಗೂ ಆಭರಣ ಪತ್ತೆಯಾಗಿದೆ.

ಇದರಿಂದ ಗಾಬರಿಗೊಳಗಾದ ಆಡಳಿತ ಮಂಡಳಿ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆದರೆ ಈ ವಿಚಾರವನ್ನು ಆದಾಯ ತೆರಿಗೆ ಇಲಾಖೆಯವರಿಗೆ ತಿಳಿಸಿದರೆ ಸೂಕ್ತ ಎಂಬ ಸಲಹೆ ಮೇರೆಗೆ ಈಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...