alex Certify
ಕನ್ನಡ ದುನಿಯಾ       Mobile App
       

Kannada Duniya

ದಾವಣಗೆರೆಯಲ್ಲಿ ರೈತರಿಗೆ ಸಿಹಿ ಸುದ್ದಿ ನೀಡಿದ ಮೋದಿ

ಬೆಂಗಳೂರು: ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಇಂದು ಬಿ.ಜೆ.ಪಿ. ವತಿಯಿಂದ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ದೇಶದಲ್ಲಿನ ಸಮಸ್ಯೆಗಳಿಗೆ ಕಾಂಗ್ರೆಸ್ ಸಂಸ್ಕೃತಿ ಕಾರಣವಾಗಿದ್ದು, ದೇಶ ಅಭಿವೃದ್ಧಿಯತ್ತ ಸಾಗಲು ಗ್ರಾಮಗಳನ್ನು ಬದಲಿಸಬೇಕಿದೆ. ರೈತರು ಅಭಿವೃದ್ಧಿಯಾಗಬೇಕಿದೆ ಎಂದು ಹೇಳಿದ್ದಾರೆ.

ಕನ್ನಡದಲ್ಲಿಯೇ ಮಾತು ಆರಂಭಿಸಿದ ಮೋದಿ, ಸಾಗರೋಪಾದಿಯಲ್ಲಿ ಸೇರಿರುವ ಅನ್ನದಾತ ಮಹಾಜನರೇ ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಸಿರಿಗೆರೆ ತರಳಬಾಳು ಶ್ರೀಗಳಿಗೆ, ಮುರುಘಾ ಶ್ರೀಗಳಿಗೆ, ಮಾದಾರ ಚನ್ನಯ್ಯ ಸ್ವಾಮೀಜಿಗೆ ನನ್ನ ನಮನಗಳು. ಓನಕೆ ಓಬವ್ವ, ಮದಕರಿ ನಾಯಕ, ಶಾಂತವೇರಿ ಗೋಪಾಲಗೌಡರಿಗೆ ನಮನಗಳು. ದಾವಣಗೆರೆ ದುಗ್ಗಮ್ಮನ ದೇವಿ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.

ಯಡಿಯೂರಪ್ಪನವರ ಜನ್ಮದಿನದಂದು ಆರಂಭವಾದ ಮುಷ್ಠಿ ಧಾನ್ಯ ಅಭಿಯಾನ ಎಲ್ಲಾ ಗ್ರಾಮಗಳನ್ನು ತಲುಪಲಿ. ಪ್ರತಿ ರೈತರಿಗೂ ಸಂದೇಶ ಹೋಗಲಿ ಎಂದು ಆಶಿಸಿದ ಅವರು, ರಾಜ್ಯದಲ್ಲಿರುವುದು ಸಿದ್ಧರಾಮಯ್ಯ ಸರ್ಕಾರ ಅಲ್ಲ, ಸೀದಾ ರೂಪಾಯಿ ಸರ್ಕಾರವಾಗಿದೆ ಎಂದು ಟೀಕಿಸಿದ್ದಾರೆ.

2022 ರ ಒಳಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದು ನಮ್ಮ ಗುರಿಯಾಗಿದೆ. ಈ ಕಾರಣಕ್ಕೆ ಕೃಷಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಲು ಉತ್ತೇಜನ ನೀಡಲಾಗ್ತಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...