alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತೆ- ಸೊಸೆಯ ಜಗಳಕ್ಕೆ ಬೇಸತ್ತು ಟವರ್ ಏರಿದ ಭೂಪ

tower mobileತನ್ನ ತಾಯಿ ಹಾಗೂ ಪತ್ನಿಯ ನಡುವೆ ಪದೇ ಪದೇ ನಡೆಯುತ್ತಿದ್ದ ಜಗಳದಿಂದ ರೋಸತ್ತು ಹೋದವನೊಬ್ಬ ಮೊಬೈಲ್ ಟವರ್ ಏರಿ ಕುಳಿತ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲದಲ್ಲಿ ನಡೆದಿದೆ.

ಕೊಡಿಯಾಲದ ಮಾದೇಶ್ ಎಂಬಾತನ ತಾಯಿ ಗೌರಮ್ಮ ಹಾಗೂ ಆತನ ಪತ್ನಿ ಗೀತಾ ನಡುವೆ ದಿನನಿತ್ಯ ಜಗಳ ನಡೆಯುತ್ತಿತ್ತೆನ್ನಲಾಗಿದೆ. ಮಾದೇಶ್ ಪತ್ನಿಯೊಂದಿಗೆ ವಾಸವಾಗಿದ್ದ ಮನೆ ಗೌರಮ್ಮನವರ ಹೆಸರಿನಲ್ಲಿದ್ದು, ಅವರು ಮನೆ ಖಾಲಿ ಮಾಡುವಂತೆ ತಾಕೀತು ಮಾಡಿದ್ದಲ್ಲದೇ ಪೊಲೀಸರಿಗೂ ದೂರು ನೀಡಿದ್ದರೆನ್ನಲಾಗಿದೆ.

ಇದೆಲ್ಲದರಿಂದ ರೋಸತ್ತು ಹೋದ ಮಾದೇಶ್, ಇಂದು ಮೊಬೈಲ್ ಟವರ್ ಏರಿ ಕುಳಿತಿದ್ದು, ಆತನನ್ನು ಕೆಳಗಿಳಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಕಡೆಗೆ ತಾಯಿ ಗೌರಮ್ಮ ಸ್ಥಳಕ್ಕಾಗಮಿಸಿ ಮಗನ ಮನವೊಲಿಸಿದ ಬಳಿಕ ಆತ ಕೆಳಗಿಳಿದಿದ್ದಾನೆ. ಅಲ್ಲದೇ ಮುಂದೆ ಅತ್ತೆ- ಸೊಸೆ ಹೊಂದಾಣಿಕೆಯಿಂದ ಇದ್ದರೆ ಮಾತ್ರ ಮನೆಯಲ್ಲಿ ಇರುವುದಾಗಿ ತಿಳಿಸಿದ್ದಾನೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...