alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನವಾಗಿದ್ದ 8 ಲಕ್ಷ ರೂ. ಮೌಲ್ಯದ ಮೊಬೈಲ್ ಗಳ ವಶ

ಶಿವಮೊಗ್ಗ : ಮೊಬೈಲ್ ಶೋ ರೂಂ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರ ತಂಡವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಂದು ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ ಖರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಹೊಸಮನೆ ಬಡಾವಣೆಯ ನಿವಾಸಿಗಳಾದ ರಾಜೇಶ್ ಆಲಿಯಾಸ್ ಕಾಡು ಮನುಷ್ಯ,  ಅಬ್ದುಲ್ ರಹೀಂನನ್ನು ಬಂಧಿಸಲಾಗಿದೆ ಎಂದರು.

ಕದ್ದ ಮೊಬೈಲ್ ಗಳನ್ನು ಖರೀದಿಸಿದ ಭದ್ರಾವತಿ ಹಳೇನಗರ ಬಡಾವಣೆಯ ರಫೀಕ್ ಹಾಗೂ ಕೇರಳ ರಾಜ್ಯದ  ಮಲ್ಲಪ್ಪುರಂ ಜಿಲ್ಲೆಯ ಫವಾಜ್ ಎಂಬಾತನ್ನೂ ದಸ್ತಗಿರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕದ್ದ ಮೊಬೈಲ್ ಗಳನ್ನು ಖರೀದಿಸುವುದೂ ಕೂಡಾ ಅಪರಾಧವಾಗಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳಿಂದ  ವಿವಿಧ ಕಂಪನಿಯ 8,05,000 ರೂ. ಮೌಲ್ಯದ 74 ಮೊಬೈಲ್ ಗಳನ್ನು  ವಶಪಡಿಸಿಕೊಳ್ಳಲಾಗಿದೆ. 1,20,000 ರೂ. ನಗದು, ಹುಂಡೈ ಸಾಂಟ್ರೋ ಕಾರು ಹಾಗೂ ಒಂದು ಸ್ಕೂಟಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಬಂಧಿತರು ದಾವಣಗೆರೆ  ಜಿಲ್ಲೆಯ ಚನ್ನಗಿರಿ ಪಟ್ಟಣದ ಮೊಬೈಲ್ ಶೋ ರೂಂನ ಕಿಟಕಿಯ ಸರಳುಗಳನ್ನು ತುಂಡು ಮಾಡಿ  ಒಳ ಪ್ರವೇಶಿಸಿ ಶೋ ರೂಂನಲ್ಲಿದ್ದ ಮೊಬೈಲ್ ಗಳನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ  ಪ್ರಕರಣ ದಾಖಲಾಗಿತ್ತು. ಕಳೆದ ನ.24 ರಂದು ಭದ್ರಾವತಿಯ ಗ್ರಾಮಾಂತರ ಠಾಣಾ ಸರಹದ್ದಿನ ಹೆಚ್.ಕೆ. ಜಂಕ್ಷನ್ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಇವರುಗಳನ್ನು ಹಿಡಿದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತು ಎಂದು ತಿಳಿಸಿದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...