alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಚಾಲಾಕಿ ಮಕ್ಕಳ ಕೈಚಳಕ

ಬೆಂಗಳೂರು: ಚಾಲಾಕಿ ಮಕ್ಕಳಿಬ್ಬರು ಮೊಬೈಲ್ ಅಂಗಡಿಗೆ ಬಂದು ಬರೋಬ್ಬರಿ 18 ಸಾವಿರ ರೂ. ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದ ಬಳಿಯ ಅಡಕಮಾರನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಅಂಗಡಿಯ ಕೌಂಟರ್ ನಲ್ಲಿನ ಹಣ, ವಸ್ತು ಕಾಣದಿದ್ದಾಗ ಅಂಗಡಿ ಮಾಲೀಕ ಮಂಜುನಾಥ್, ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಆಗಲೇ ಬೆಳಕಿಗೆ ಬಂದಿದೆ ಚಾಲಾಕಿ ಮಕ್ಕಳ ಕೈಚಳಕ.

ಮಧ್ಯಾಹ್ನದ ವೇಳೆಗೆ ಬಂದ ಬಾಲಕನೊಬ್ಬ, ತನ್ನ ಕೈಗೆ ಸಿಕ್ಕ ವಸ್ತುಗಳನ್ನು ಹಾಗೂ ಹಣವನ್ನು ತೆಗೆದುಕೊಂಡು ಹೋಗಿದ್ದಾನೆ. ಅದಾದ ಬಳಿಕ ಕೆಲ ಹೊತ್ತಿನಲ್ಲಿ ಅದೇ ಬಾಲಕ ತನ್ನ ಅಣ್ಣನೊಂದಿಗೆ ಬಂದು ಕೌಂಟರ್ ನಲ್ಲಿದ್ದ ಇನ್ನಷ್ಟು ಹಣವನ್ನು ಮೆಲ್ಲಗೆ ಎಗರಿಸಿಕೊಂಡು ಹೋಗುತ್ತಾನೆ. ಈ ಎಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಸ್ಥಳೀಯ ಮಕ್ಕಳ ಕೈಚಳಕ ಕಂಡು ಬೆರಗಾದ ಅಂಗಡಿ ಮಾಲೀಕ ಮಕ್ಕಳ ಮನೆಯನ್ನು ಪತ್ತೆ ಹಚ್ಚಿ, ವಿಚಾರಣೆ ನಡೆಸಿ ಕದ್ದ 18 ಸಾವಿರ ಹಣವನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...