alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಆಸ್ಪತ್ರೆ ರೋಗಿಗಳಿಗೆ ಮೊಬೈಲ್ ಬೆಳಕೇ ಆಧಾರ…!

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯ ವಿದ್ಯುತ್ ಸಮಸ್ಯೆಗೆ ಅಂತ್ಯವಿಲ್ಲವಾಗಿದೆ. ಪ್ರತಿನಿತ್ಯ ಗಂಟೆಗಟ್ಟಲೆ ಪವರ್ ಕಟ್ ಆಗುವುದರಿಂದ, ರಾತ್ರಿ ವೇಳೆ ಆಸ್ಪತ್ರೆಯಲ್ಲಿರುವ ರೋಗಿಗಳು ಮೊಬೈಲ್ ಟಾರ್ಚ್ ನಲ್ಲಿ ಸಮಯ ಸಾಗಿಸಬೇಕಾಗಿದೆ.

ಹೆಚ್ಚಾಗಿ ಬಡ ವರ್ಗದ ಜನರೇ ಚಿಕಿತ್ಸೆಗೆಂದು ಆಗಮಿಸುವ ಈ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಕರೆಂಟ್ ಇಲ್ಲದ ಸಮಯದಲ್ಲಿ ಜನರೇಟರ್ ಹಾಕಲು, ಅದು ಕೂಡ ಹಾಳಾಗಿದೆ. ಅದನ್ನು ಸರಿಪಡಿಸಲು ಅಗತ್ಯ ಅನುದಾನ ಬಂದಿಲ್ಲ ಎಂದು ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ಅಸಹಾಯಕತೆ ತೋರುತ್ತಿದ್ದಾರೆ.

ವಾರ್ಡ್ ಗಳಲ್ಲಿರುವ ರೋಗಿಗಳನ್ನು ನೋಡಲು ನರ್ಸ್ ಗಳು ಮೊಬೈಲ್ ಟಾರ್ಚ್ ಬಳಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನು ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಉಳಿದುಕೊಳ್ಳುವ ಸಂಬಂಧಿಕರಿಗೆ ಹಾಸಿಗೆ ವ್ಯವಸ್ಥೆಗೆ ಇಲ್ಲವಾಗಿದೆ. ಈಗಾಗಲೇ ರಾಜ್ಯ ಸರಕಾರ ಡಾರ್ಮೆಂಟರಿ ನಿರ್ಮಾಣಕ್ಕೆಂದು 1.2 ಕೋಟಿ ರೂ. ಅನುದಾನ ನೀಡಿದ್ದರೂ, ಅದಕ್ಕೆ ಒಪ್ಪಿಗೆ ದೊರೆತ್ತಿಲ್ಲ. ಜನರೇಟರ್ ಸರಿಪಡಿಸಲು ಅನುದಾನ ನೀಡಿಲ್ಲ. ಈ ರೀತಿ ಅವ್ಯವಸ್ಥೆಯಿದ್ದರೆ ಚಿಕಿತ್ಸೆಗೆಂದು ಬರುವ ರೋಗಿಗಳ ತೊಂದರೆಯಾಗುತ್ತದೆ ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...