alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯಿಂದಲೇ ಬಯಲಾಯ್ತು BJP ಶಾಸಕನ ಅನೈತಿಕ ಸಂಬಂಧ..?

mla-psi

ಬೆಂಗಳೂರು: ರಾಜ್ಯದ ಬಿ.ಜೆ.ಪಿ. ಶಾಸಕರೊಬ್ಬರು ಮಹಿಳಾ ಪಿ.ಎಸ್.ಐ. ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಪ್ರಕರಣ ಮಹಿಳಾ ಆಯೋಗದ ಮೆಟ್ಟಿಲೇರಿದೆ.

33 ವರ್ಷದ ಮಹಿಳಾ ಪಿ.ಎಸ್.ಐ. ಅವಿವಾಹಿತರಾಗಿದ್ದು, ಆಕೆಯೊಂದಿಗೆ ತನ್ನ ಪತಿ ಅನೈತಿಕ ಸಂಬಂಧ ಹೊಂದಿದ್ದಾರೆ. ಆಕೆಗೆ ದೇವನಹಳ್ಳಿಯಲ್ಲಿ ಮನೆ ಮಾಡಿಕೊಟ್ಟಿದ್ದು, ಪತ್ನಿ, ಮಕ್ಕಳಿಗಿಂತ ಹೆಚ್ಚಾಗಿ ಆಕೆಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಶಾಸಕರ ಪತ್ನಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಆದರೆ, ಇದನ್ನು ಶಾಸಕರು ಅಲ್ಲಗಳೆದಿದ್ದಾರೆ. ಪಿ.ಎಸ್.ಐ. ನನಗೆ ಪರಿಚಯವಿದೆ. ನನ್ನ ಪತ್ನಿ ಮಹಿಳಾ ಆಯೋಗಕ್ಕೆ ದೂರು ನೀಡಿಲ್ಲ. ಇದೆಲ್ಲವೂ ನನ್ನ ತೇಜೋವಧೆಗೆ ಮಾಡಿರುವ ಷಡ್ಯಂತ್ರವಾಗಿದೆ ಎಂದು ದೂರಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವುದರಿಂದ ನನ್ನ ಪತ್ನಿಯ ಹೆಸರಲ್ಲಿ ಯಾರೋ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾನು ಮಹಿಳಾ ಆಯೋಗದ ಅಧ್ಯಕ್ಷರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ಶಾಸಕರ ಪತ್ನಿಯೂ ಸ್ಪಷ್ಟನೆ ನೀಡಿದ್ದು, ನಾನು ಯಾರಿಗೂ ದೂರು ನೀಡಿಲ್ಲ. ಪತಿಯೊಂದಿಗೆ ನಾನು ಅನ್ಯೋನ್ಯವಾಗಿಯೇ ಇದ್ದೇನೆ. ರಾಜಕೀಯ ಕಾರಣದಿಂದ ಇಂತಹ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ತಿಳಿಸಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...