alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಸಕ ಆನಂದ್ ಸಿಂಗ್ ಎಲ್ಲಿದ್ದಾರೆ ಗೊತ್ತಾ?

ಸರ್ಕಾರ ರಚನೆ ಕಸರತ್ತಿನ ಯುದ್ಧ ಮುಂದುವರೆದಿದೆ. ನಾಳೆ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆಯಿದೆ. ಕಾಂಗ್ರೆಸ್-ಜೆಡಿಎಸ್ ಎಲ್ಲ ಶಾಸಕರನ್ನು ರಕ್ಷಿಸುವ ಯತ್ನ ಮುಂದುವರೆಸಿದೆ. ಹೈದ್ರಾಬಾದ್ ನಲ್ಲಿ ಎಲ್ಲ ಶಾಸಕರಿದ್ದು, ನಾಪತ್ತೆಯಾಗಿರುವ ಆನಂದ್ ಸಿಂಗ್ ಒಪ್ಪಿಗೆ ಪತ್ರ ನಮ್ಮ ಬಳಿಯಿದೆ ಎಂದು ಕಾಂಗ್ರೆಸ್ ಹೇಳಿತ್ತು. ಆದ್ರೀಗ ಕಾಂಗ್ರೆಸ್ ಮಾತು ಬದಲಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗುಲಾಂ ನಬಿ ಆಜಾದ್ ಆನಂದ್ ಸಿಂಗ್ ನಮ್ಮ ಸಂಪರ್ಕದಲ್ಲಿಲ್ಲ ಎಂದಿದ್ದಾರೆ. ಆನಂದ್ ಸಿಂಗ್ ದೆಹಲಿಯಲ್ಲಿದ್ದು, ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿ ಬಂಧಿಯಾಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಕೂಡ ಧ್ವನಿಗೂಡಿಸಿದ್ದಾರೆ.

ಆನಂದ್ ಸಿಂಗ್ ಗೆ ಇಡಿ ಬೆದರಿಕೆ ನೀಡಿ ಬಿಜೆಪಿ ನಾಯಕರು  ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಆನಂದ್ ಸಿಂಗ್ ರನ್ನು ಬಿಜೆಪಿ ಅಪಹರಿಸಿದೆ. ಆನಂದ್ ಸಿಂಗ್ ಬಿಜೆಪಿ ಕಪಿಮುಷ್ಠಿಯಿಂದ ಬಿಡುಗಡೆಯಾಗ್ತಿದ್ದಂತೆ ನಮ್ಮ ಜೊತೆ ಬರಲಿದ್ದಾರೆ. ಕಾಂಗ್ರೆಸ್ ಗೆ ಮತ ಹಾಕಲಿದ್ದಾರೆಂದು ಸಿದ್ಧರಾಮಯ್ಯ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...