alex Certify
ಕನ್ನಡ ದುನಿಯಾ       Mobile App
       

Kannada Duniya

ಜಲಪಾತ ನೋಡಲು ಹೋದ ವಿದ್ಯಾರ್ಥಿಗಳು ನಾಪತ್ತೆ

misg-nm

ಮಡಿಕೇರಿ: ಜಲಪಾತ ನೋಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು, ನಿಗೂಢವಾಗಿ ನಾಪತ್ತೆಯಾದ ಘಟನೆ ಮಡಿಕೇರಿ ಜಿಲ್ಲೆಯಲ್ಲಿ ನಡೆದಿದೆ.

ವಿರಾಜಪೇಟೆ ತಾಲ್ಲೂಕಿನ ಚೇಲಾವರ ಫಾಲ್ಸ್ ನೋಡಲು ಹೋಗಿದ್ದ ಬಿ.ಕೆ. ಸೋಮಣ್ಣ ಮತ್ತು ಕೆ.ಸಿ. ಸೋಮಣ್ಣ ಅವರು ನಾಪತ್ತೆಯಾದವರು. ಜಲಪಾತದ ಬಳಿ ಇಬ್ಬರ ಬ್ಯಾಗ್ ಪತ್ತೆಯಾಗಿವೆ. ಪೊನ್ನಂಪೇಟೆಯ ಪದವಿ ಕಾಲೇಜೊಂದರಲ್ಲಿ ಇಬ್ಬರೂ ಅಂತಿಮ ವರ್ಷದ ಬಿಕಾಂ ಕಲಿಯುತ್ತಿದ್ದು, ಚೇಲಾವರ ಫಾಲ್ಸ್ ವೀಕ್ಷಣೆಗೆ ತೆರಳಿ, ಅಲ್ಲಿಂದ ನಾಪತ್ತೆಯಾಗಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು ನಿಗೂಢವಾಗಿ ನಾಪತ್ತೆಯಾಗಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ನಾಪೊಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...