alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗಡಿಯಲ್ಲೇ ಬ್ಲಾಸ್ಟ್ ಆಯ್ತು ರೆಡ್ ಮಿ ಮೊಬೈಲ್

ತುಮಕೂರು: ಅಂಗಡಿಯಲ್ಲೇ ರೆಡ್ ಮಿ ನೋಟ್ 4 ಮೊಬೈಲ್ ಫೋನ್ ಸ್ಪೋಟಗೊಂಡ ಘಟನೆ ತುಮಕೂರಿನ ಟೌನ್ ಹಾಲ್ ಸರ್ಕಲ್ ಬಳಿ ನಡೆದಿದೆ.

ಪ್ರದೀಪ್ ಎಂಬುವವರ ಮೊಬೈಲ್ ಶಾಪ್ ನಲ್ಲಿ ಮೊಬೈಲ್ ಗೆ ಸ್ಕ್ರೀನ್ ಗಾರ್ಡ್ ಹಾಕಿಸಲು ವ್ಯಕ್ತಿಯೊಬ್ಬರು ಬಂದಿದ್ದು, ಅವರಿಂದ ಮೊಬೈಲ್ ಪಡೆದು ಸ್ಕ್ರೀನ್ ಗಾರ್ಡ್ ಹಾಕುವ ಸಂದರ್ಭದಲ್ಲಿ ಒಮ್ಮೆಲೆ ಸ್ಪೋಟಗೊಂಡಿದೆ.

ಕೂಡಲೇ ಅಂಗಡಿ ಮಾಲೀಕ ಹಾಗೂ ಮೊಬೈಲ್ ತಂದವರು ಅಲ್ಲಿಂದ ಹೊರ ಬಂದಿದ್ದಾರೆ. ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮೆರಾದಲ್ಲಿ ಈ ದೃಶ್ಯಗಳೆಲ್ಲಾ ಸೆರೆಯಾಗಿದೆ.

ಪ್ರದೀಪ್, ಸ್ಕ್ರೀನ್ ಗಾರ್ಡ್ ಹಾಕಲು ರೆಡ್ ಮಿ ನೋಟ್ 4 ಕೈಯಲ್ಲಿಡಿದುಕೊಂಡಿದ್ದು, ಫೋನ್ ನಿಂದ ಹೊಗೆ ಬಂದಿದ್ದು, ಅವರು ಟೇಬಲ್ ಮೇಲೆ ಎಸೆದ ಕೂಡಲೇ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಸ್ಪೋಟದ ತೀವ್ರತೆಗೆ ಮೊಬೈಲ್ ನ ಸಣ್ಣ ಭಾಗಗಳು ಸಿಡಿದಿವೆ. ಬ್ಯಾಟರಿ ದೋಷದಿಂದ ಹೀಗೆ ಆಗಿರಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...