alex Certify
ಕನ್ನಡ ದುನಿಯಾ       Mobile App
       

Kannada Duniya

ಕರೆಂಟ್ ಪ್ರಾಬ್ಲಂ ಕುರಿತು ಮಿನಿಸ್ಟರ್ ಗೇ ಆವಾಜ್ !

dkshivakumar

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಏನೆಲ್ಲಾ ಅವಾಂತರಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ವಿದ್ಯುತ್ ಪದೇ ಪದೇ ಕೈ ಕೊಡುತ್ತಿರುವುದಕ್ಕೆ ಇಂಧನ ಸಚಿವರಿಗೇ ಫೋನ್ ಮಾಡಿ ಆವಾಜ್ ಹಾಕಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸುಳ್ಯದ ವರ್ತಕರ ಸಂಘದ ಪದಾಧಿಕಾರಿಯಾಗಿರುವ ವ್ಯಕ್ತಿಯೊಬ್ಬರು ವಿದ್ಯುತ್ ಸಮಸ್ಯೆಯಿಂದ ವ್ಯವಹಾರಕ್ಕೆ ತೊಂದರೆಯಾಗಿದೆ ಎಂದು ಇಂಧನ ಸಚಿವ ಡಿ. ಕೆ. ಶಿವಕುಮಾರ್ ಅವರಿಗೆ ಫೋನ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಈ ಬಗ್ಗೆ ಶಿವಮಕುಮಾರ್ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ನೀಡಿದ್ದು, ಇದರ ಅನ್ವಯ ಪೊಲೀಸರು ತನಿಖೆ ಕೈಗೊಂಡಾಗ ಅದು ಸುಳ್ಯದ ವರ್ತಕ ಗಿರಿಧರ್ ಎಂಬುವವರು ಪೋನ್ ಮಾಡಿದ್ದೆಂಬುದು ಗೊತ್ತಾಗಿದೆ.

ಗಿರಿಧರ್ ಅವರನ್ನು ಬಂಧಿಸಲು ಮನೆಗೆ ಹೋದ ಪೊಲೀಸರಿಗೆ ಮನೆಯ ಬಾಗಿಲು ಮುಚ್ಚಿದ್ದು ಕಂಡು ಬಂದಿದೆ, ಗಿರಿಧರ್ ಮನೆಯೊಳಗೇ ಇರುವುದನ್ನು ಅರಿತ ಪೊಲೀಸರು ಹೆಂಚು ತೆಗೆದು ಇಳಿದು ಅವರನ್ನು ಬಂಧಿಸಿದ್ದು, ಅಸಭ್ಯ ಪದಬಳಕೆ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಕೇಸು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...