alex Certify
ಕನ್ನಡ ದುನಿಯಾ       Mobile App
       

Kannada Duniya

ಹೊರಟ್ಟಿ, ವಿಶ್ವನಾಥ್ ಗೂ ಇಲ್ಲ ಸಚಿವ ಸ್ಥಾನ…?

ಸಚಿವ ಸ್ಥಾನ ಕುರಿತಂತೆ ಜೆಡಿಎಸ್ ನಲ್ಲಿ ಮಹತ್ವದ ಬೆಳವಣಿಗೆಗಳಾಗಿದ್ದು, ಬಸವರಾಜ್ ಹೊರಟ್ಟಿ ಹಾಗೂ ಹೆಚ್. ವಿಶ್ವನಾಥ್ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಲಾಗುತ್ತಿಲ್ಲವೆಂದು ತಿಳಿದು ಬಂದಿದೆ.

ಕಾಂಗ್ರೆಸ್ ಜೊತೆ ಮೈತ್ರಿಕೂಟದ ಸರ್ಕಾರ ರಚಿಸಿರುವ ಕಾರಣ ಜೆಡಿಎಸ್ ಪಾಲಿಗೆ ಕೇವಲ ಹನ್ನೊಂದು ಸಚಿವ ಸ್ಥಾನಗಳು ಮಾತ್ರ ಲಭ್ಯವಾಗಿದ್ದು, ಹೀಗಾಗಿ ಜಿಲ್ಲೆಗೊಂದೇ ಮಂತ್ರಿ ಸ್ಥಾನ ಎಂಬ ತೀರ್ಮಾನಕ್ಕೆ ಜೆಡಿಎಸ್ ವರಿಷ್ಠರು ಬಂದಿದ್ದರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಿಂದ ಜಿ.ಟಿ. ದೇವೇಗೌಡ ಅವರಿಗೆ ಸಚಿವ ಸ್ಥಾನ ನೀಡುತ್ತಿರುವ ಕಾರಣ, ಹೆಚ್. ವಿಶ್ವನಾಥ್ ಅವಕಾಶ ವಂಚಿತರಾಗಲಿದ್ದಾರೆನ್ನಲಾಗಿದೆ. ಇನ್ನು ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸದಸ್ಯರಾಗಿರುವ ಕಾರಣ ಸಚಿವ ಸ್ಥಾನ ಲಭಿಸುವುದು ಅನುಮಾನವೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...