alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಗಿಡ ಅಪಾಯಕಾರಿ ಅದ್ಕೆ ಕಿತ್ತು ಹಾಕಿದೀವಿ ಎಂದ ಸಚಿವ

ಚಾಮರಾಜನಗರ: ಸಮ್ಮಿಶ್ರ ಸರ್ಕಾರದ ಸಚಿವರೇ ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಶಿಕ್ಷಣ ಸಚಿವ ಎನ್. ಮಹೇಶ್, ಕಾಂಗ್ರೆಸ್ ಪಕ್ಷದ ವಿರುದ್ಧವೇ ನೀಡಿದ ವಿಡಂಬನಾತ್ಮಕ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಗಿಡ ಅಪಾಯಕಾರಿ ಹಾಗಾಗಿ ಅದನ್ನು ಕಿತ್ತು ಹಾಕುವ ಕೆಲಸ ಮಾಡಿದ್ದೇವೆ. ಪಾರ್ಥೇನಿಯಂ ಗಿಡ ಅಂತ ಅದನ್ನು ಕರೆದ್ರೂ ಅದು ಕಾಂಗ್ರೆಸ್ ಗಿಡ. ಹಾಗಾಗಿ ಅದು ತುಂಬಾ ಅಪಾಯಕಾರಿಯಾಗಿದೆ. ಅದಕ್ಕೆ ಕಾಂಗ್ರೆಸ್ ಗಿಡವನ್ನು ಕಡಿಯುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಸ್ವಚ್ಚಾತಾ ಕಾರ್ಯಕ್ರಮದಲ್ಲಿ ಸಚಿವರು ನೀಡಿದ ಈ ಹೇಳಿಕೆ ಸಾಕಷ್ಟು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದ್ದು, ಮೈತ್ರಿ ಸರ್ಕಾರದಲ್ಲಿ ಸಚಿವರುಗಳೇ ಕಾಂಗ್ರೆಸ್ ವಿರುದ್ಧ ತಂತ್ರ ಹೆಣೆಯುತ್ತಿದ್ದು, ಪಕ್ಷ ನಿರ್ಮೂಲನೆಗೆ ಮುಂದಾಗಿದ್ದಾರೆಯೇ ಎಂಬ ಚರ್ಚೆಗೆ ಗ್ರಾಸವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...