alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ತಲಲ್ಲಿ ಹಾವು ತುಳಿದು ಬೆಚ್ಚಿ ಬಿದ್ರು ಸಚಿವ ಕಿಮ್ಮನೆ ರತ್ನಾಕರ್‍

kimmane-rathanaker-new

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಹಾಗೂ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಹಾವು ತುಳಿದ ಘಟನೆ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಚಿವರು ಹಾವೊಂದನ್ನು ತುಳಿದಿದ್ದಾರೆ ಎಂದು ಹೇಳಲಾಗಿದೆ.

ತೀರ್ಥಹಳ್ಳಿಯ ತಾಲ್ಲೂಕು ಕಚೇರಿ ಸಮೀಪ ಕಿಮ್ಮನೆ ರತ್ನಾಕರ್ ನಡೆದುಕೊಂಡು ಬರುತ್ತಿದ್ದು, ಕತ್ತಲಲ್ಲಿ ಕಾಣದೇ ಅಡ್ಡಲಾಗಿ ಬಂದ ಹಾವೊಂದರ ಮೇಲೆ ಕಾಲಿಟ್ಟಿದ್ದಾರೆ. ಇದರಿಂದ ಗಾಬರಿಯಾಗಿ ಅವರು ಕೆಳಗೆ ಬಿದ್ದಿದ್ದಾರೆ. ಕೂಡಲೇ ಅಕ್ಕಪಕ್ಕದಲ್ಲೇ ಇದ್ದ ಅವರ ಬೆಂಬಲಿಗರು ಸಚಿವರನ್ನು ಮೇಲಕ್ಕೆ ಎತ್ತಿದ್ದಾರೆ. ಘಟನೆಯಿಂದಾಗಿ ಸಚಿವರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದಾರೆ. ಹಾವು ಕಚ್ಚದೇ ಕತ್ತಲಲ್ಲಿ ಕಾಣೆಯಾಗಿದೆ ಎಂದು ಹೇಳಲಾಗಿದೆ.

ಸಚಿವ ಕಿಮ್ಮನೆ ರತ್ನಾಕರ್ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಲ್ಲೂಕು ಕಚೇರಿಯಿಂದ ಹೊರಟಿದ್ದರು. ಅಲ್ಲಿ ಬೆಂಬಲಿಗರೊಂದಿಗೆ ಮಾತನಾಡುತ್ತಾ ಬರುವಾಗ ಕತ್ತಲಲ್ಲಿ ಹಾವು ಹರಿದಾಡುತ್ತಿರುವುದನ್ನು ಕಾಣದೇ ತುಳಿದು, ಗಾಬರಿಯಿಂದ ಕೆಳಗೆ ಬಿದ್ದರು ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...