alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ ಸಚಿವರಿಗೆ ಯಾವ ಖಾತೆ..? ಇಲ್ಲಿದೆ ವಿವರ

siddaramaiah_64457ಭಾನುವಾರದಂದು ತಮ್ಮ ಸಚಿವ ಸಂಪುಟ ಪುನಾರಚನೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಜೊತೆಗೆ ಈ ಹಿಂದೆ ಇದ್ದ ಸಚಿವರ ಖಾತೆಗಳಲ್ಲಿಯೂ ಅಲ್ಪ ಸ್ವಲ್ಪ ಬದಲಾವಣೆಯಾಗಿದೆ.

ಕಾಗೋಡು ತಿಮ್ಮಪ್ಪನವರಿಗೆ ಕಂದಾಯ ಖಾತೆ, ರಮೇಶ್ ಕುಮಾರ್ ಅವರಿಗೆ ಯು.ಟಿ. ಖಾದರ್ ಹೊಂದಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಲಾಗಿದೆ. ಯು.ಟಿ. ಖಾದರ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜವಾಬ್ದಾರಿ ವಹಿಸಲಾಗಿದೆ.

ಹೆಚ್.ವೈ. ಮೇಟಿ- ಅಬಕಾರಿ, ತನ್ವೀರ್ ಸೇಠ್- ಉನ್ನತ ಶಿಕ್ಷಣ, ವಕ್ಫ್, ಪ್ರಮೋದ್ ಮಧ್ವರಾಜ್- ಮೀನುಗಾರಿಕೆ, ಬಂದರು, ಈಶ್ವರ್ ಖಂಡ್ರೆ- ಪೌರಾಡಳಿತ, ವಿಧಾನ ಪರಿಷತ್ ಸದಸ್ಯ ಎಂ.ಆರ್, ಸೀತಾರಾಂ- ಯೋಜನೆ ಮತ್ತು ಸಾಂಖ್ಯಿಕ ಖಾತೆ, ಸಂತೋಷ್ ಲಾಡ್- ಕಾರ್ಮಿಕ ಖಾತೆ, ರಮೇಶ್ ಜಾರಕಿಹೊಳಿ- ಸಣ್ಣ ಕೈಗಾರಿಕೆ, ಪ್ರಿಯಾಂಕ್ ಖರ್ಗೆ- ಐಟಿ, ಬಿಟಿ ಮತ್ತು ಪ್ರವಾಸೋದ್ಯಮ, ರುದ್ರಪ್ಪ ಲಮಾಣಿ- ಮುಜರಾಯಿ, ಜವಳಿ, ಬಸವರಾಜ ರಾಯರೆಡ್ಡಿ- ಪ್ರಾಥಮಿಕ, ಪ್ರೌಢ ಶಿಕ್ಷಣ ಖಾತೆಗಳನ್ನು ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...