alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ವಿರುದ್ದ ವಂಚನೆ ಆರೋಪ ಮಾಡಿದ್ದವನ ಬಣ್ಣ ಬಯಲು

hqdefault

ಖ್ಯಾತ ನಟಿ ಮೇಘನಾ ರಾಜ್ ತಮ್ಮನ್ನು ವಿವಾಹವಾಗಿ ವಂಚಿಸಿದ್ದಾರೆಂದು ಸುಳ್ಳು ದೂರು ನೀಡಿದ್ದ ತಮಿಳುನಾಡು ಮೂಲದ ಜನಾರ್ಧನ್ ಬಣ್ಣ ಬಯಲಾಗಿದೆ. ಪೊಲೀಸ್ ವಿಚಾರಣೆ ವೇಳೆ ತನ್ನ ದೂರಿಗೆ ಪೂರಕವಾಗಿ ಯಾವುದೇ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಜನಾರ್ಧನ್ ವಿಫಲರಾಗಿದ್ದಾರೆ.

ಕನ್ನಡ, ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಇದುವರೆಗಿನ ತಮ್ಮ ಚಿತ್ರ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿಯಿಲ್ಲದಂತೆ ಇರುವ ಮೇಘನಾ ರಾಜ್ ವಿರುದ್ದ ತಮಿಳುನಾಡಿನ ಧರ್ಮಪುರಿಯ ಜನಾರ್ಧನ್ ತಾನು ಮೇಘನಾ ರಾಜ್ ಜೊತೆ ವಿವಾಹವಾಗಿರುವುದಾಗಿ ದೂರು ನೀಡಿದ್ದು, ಗೊಂದಲಕ್ಕೆ ಕಾರಣವಾಗಿತ್ತು.

ಜನಾರ್ಧನ್ ದೂರಿನ ವಿಚಾರಣೆಗಾಗಿ ಪೊಲೀಸರು ಆತನನ್ನು ಠಾಣೆಗೆ ಕರೆಸಿಕೊಂಡ ವೇಳೆ, ಮೇಘನಾ ರಾಜ್ ಜೊತೆ ತಾನು ವಿವಾಹವಾಗಿರುವುದರ ಕುರಿತು ಯಾವುದೇ ಸಾಕ್ಷ್ಯ ನೀಡಲು ವಿಫಲನಾಗಿದ್ದಾನೆ. ಜೊತೆಗೆ ಮೇಘನಾ ರಾಜ್ ಪರಿಚಯವಿರುವ ಕುರಿತೂ ಸೂಕ್ತ ಮಾಹಿತಿ ನೀಡಿಲ್ಲವೆನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಆರಂಭಿಕ ಹಂತದಲ್ಲೇ ಆತನ ದೂರನ್ನು ಕ್ಲೋಸ್ ಮಾಡಿದ್ದಾರೆ.

ತಮ್ಮ ಪುತ್ರಿಯ ವಿರುದ್ದ ಆನಾಮಧೇಯ ವ್ಯಕ್ತಿಯೊಬ್ಬ ನೀಡಿದ ದೂರಿನ ಕುರಿತು ಆಕ್ರೋಶ ವ್ಯಕ್ತಪಡಿಸಿದ ಹಿರಿಯ ನಟಿ ಪ್ರಮೀಳಾ ಜೋಷಾಯ್, ಸುಳ್ಳು ದೂರು ನೀಡಿದವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮೇಘನಾ ರಾಜ್ ಅವರಾಗಲಿ ಅಥವಾ ಅವರ ಪೋಷಕರಾಗಲಿ ದೂರು ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...