alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಗರದಲ್ಲಿ ಸ್ವಾಮೀಜಿ ವಿಚಾರಕ್ಕೆ ಘರ್ಷಣೆ

raghaveshwara-shree

ಶಿವಮೊಗ್ಗ: ಹೊಸನಗರ ತಾಲ್ಲೂಕು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಭಕ್ತರ ಎರಡು ಬಣಗಳ ನಡುವೆ ಘರ್ಷಣೆ ಉಂಟಾಗಿದೆ. ಸಾಗರದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ರಾಘವೇಶ್ವರ ಶ್ರೀಗಳ ವಿರುದ್ಧವಾಗಿರುವ ಭಕ್ತರು ಸಮಾನಮನಸ್ಕರ ವೇದಿಕೆ ಹೆಸರಿನಲ್ಲಿ ಸಾಗರದ ಬ್ರಾಹ್ಮಣ ಸಂಘದ ಸಭಾಂಗಣದಲ್ಲಿ ಸಭೆಯೊಂದನ್ನು ಆಯೋಜಿಸಿದ್ದರು. ಈ ಸಭೆ ಆರಂಭವಾಗುವ ಸಮಯ ಸಮೀಸುತ್ತಿದ್ದಂತೆ ಸ್ವಾಮೀಜಿ ಪರವಾಗಿರುವ ಭಕ್ತರು ಅಲ್ಲಿಗೆ ಆಗಮಿಸಿ, ಸಭೆಗೆ ಹೊರಟಿದ್ದವರನ್ನು ತಡೆದಿದ್ದಾರೆ. ಇದೇ ವಿಚಾರಕ್ಕೆ ಘರ್ಷಣೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಸಮಾನ ಮನಸ್ಕರ ಸಭೆಗೆ ಹೋಗದಂತೆ ಸ್ವಾಮೀಜಿ ಪರ ಇರುವ ಭಕ್ತರು ತಡೆದಿರುವುದಕ್ಕೆ ಸಮಾನ ಮನಸ್ಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...