alex Certify
ಕನ್ನಡ ದುನಿಯಾ       Mobile App
       

Kannada Duniya

657 ಪರೀಕ್ಷೆ ಬರೆದಿದ್ದಾರೆ ಈ ಮಹಿಳೆ, ಯಾರಿಗಾಗಿ ಗೊತ್ತಾ?

ಎನ್.ಎಂ. ಪುಷ್ಪಪ್ರಿಯಾ ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ. 30 ವರ್ಷದ ಈಕೆ ವಿಕಲಚೇತನರಿಗಾಗಿ 10 ವರ್ಷಗಳಲ್ಲಿ 657 ಪರೀಕ್ಷೆ ಬರೆದಿದ್ದಾರೆ. ಕೈಗಳಿಲ್ಲದವರಿಗೆ ಕೈಯ್ಯಾಗಿ, ಕಣ್ಣಿಲ್ಲದವರಿಗೆ ದೃಷ್ಟಿಯಾಗಿದ್ದಾರೆ ಪುಷ್ಪಪ್ರಿಯಾ.

ವಿಕಲಚೇತನರ ಪರವಾಗಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದಾರೆ. 2007ರಲ್ಲಿ ಮೊದಲ ಬಾರಿಗೆ ಅಂಧ ವಿದ್ಯಾರ್ಥಿಗಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದರು. ಆಗಿನಿಂದ್ಲೂ ಇವರ ಸೇವೆ ಮುಂದುವರಿಯುತ್ತಲೇ ಇದೆ. ತುಂಬಾ ಸಹನೆಯಿಂದ ಸ್ವಲ್ಪವೂ ಟೆನ್ಷನ್ ಮಾಡಿಕೊಳ್ಳದೇ ಪರೀಕ್ಷೆ ಬರೆಯುತ್ತಾರೆ.

ಯಾಕಂದ್ರೆ ತಾವು ಬರೆಯುತ್ತಿರುವ ಪರೀಕ್ಷೆ ವಿಕಲಚೇತನ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತದೆ ಅನ್ನೋದನ್ನು ಪುಷ್ಪಪ್ರಿಯ ಅರ್ಥಮಾಡಿಕೊಂಡಿದ್ದಾರೆ. ಕೆಲವೊಮ್ಮೆ ಪ್ರಶ್ನೆಯನ್ನು ಅರ್ಥ ಮಾಡಿಸಲು ಪರೀಕ್ಷಾರ್ಥಿಗಳಿಗೆ 30-40 ಬಾರಿ ಅದನ್ನು ಓದಿ ಹೇಳಬೇಕಾಗಿ ಬರುತ್ತದೆ, ಹಾಗಾಗಿ ತಾಳ್ಮೆ ಅವಶ್ಯಕ ಎನ್ನುತ್ತಾರೆ.

ಹಿಂದೊಮ್ಮೆ ಶಾಲೆಯ ಫೀಸ್ ಕಟ್ಟಲು ಅವರ ತಂದೆಯ ಬಳಿ ಹಣವಿರಲಿಲ್ಲವಂತೆ. ಆಗ ಕೆಲವರು ಸಹಾಯ ಮಾಡಿದ್ದರು. ಈಗ ಸಮಾಜಕ್ಕೆ ಅದನ್ನು ಮರಳಿಸುವ ಸಮಯ ಅಂತಾ ಹೇಳಿದ್ದಾರೆ. ಈ ರೀತಿ ಅಂಧರು, ಕಿವುಡರು, ವಿಕಲ ಚೇತನರ ಶಿಕ್ಷಣಕ್ಕೆ ದಾರಿದೀಪವಾಗಿದ್ದಾರೆ ಪುಷ್ಪಪ್ರಿಯ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...