alex Certify
ಕನ್ನಡ ದುನಿಯಾ       Mobile App
       

Kannada Duniya

ಕಷ್ಟ ಕಾಲದಲ್ಲಿ ಪಕ್ಷದ ನೆರವಿಗೆ ಧಾವಿಸುವ ಡಿಕೆಶಿ…!

ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ನಾಯಕ. ಪಕ್ಷಕ್ಕೆ ತೊಂದರೆಯಾಗ್ತಿದೆ ಅಂತಾ ಗೊತ್ತಾದ್ರೆ ಸಾಕು, ಅದನ್ನ ಸರಿಪಡಿಸುವ ಸಂಪೂರ್ಣ ಜವಾಬ್ದಾರಿಯನ್ನ ಡಿ.ಕೆ.ಶಿವಕುಮಾರ್ ತೆಗೆದುಕೊಳ್ತಾರೆ. ಇಂತಹ ನಾಯಕ ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ತಮ್ಮ 78 ಶಾಸಕರನ್ನ, ಬಿಜೆಪಿ ಕುದುರೆ ವ್ಯಾಪಾರದಿಂದ ತಪ್ಪಿಸಿ ಸುರಕ್ಷಿತವಾಗಿಟ್ಟಿದ್ದಾರೆ.

ಡಿ.ಕೆ. ಶಿವಕುಮಾರ್ ಗೆ ಇಂತಹ ಕೆಲಸ ಹೊಸದೇನಲ್ಲ. 2001 ರಲ್ಲಿ ಮಹಾರಾಷ್ಟ್ರದಲ್ಲಿದ್ದ ವಿಲಾಸ್ ರಾವ್ ದೇಶ್ ಮುಖ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕುಸಿದು ಬೀಳುವ ಹಂತದಲ್ಲಿತ್ತು. ಹೀಗಾಗಿ ಮುಖ್ಯಮಂತ್ರಿ ದೇಶ್ ಮುಖ್ ತಮ್ಮೆಲ್ಲಾ ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸಿದ್ರು.

ಆಗ ಇಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ, ಮಹಾರಾಷ್ಟ್ರದ ಶಾಸಕರ ಜವಾಬ್ದಾರಿಯನ್ನು, ಅಂದು ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ್ದರು. ಹೀಗಾಗಿ ಡಿಕೆಶಿ ಅಂದು ಒಂದು ವಾರಗಳ ಕಾಲ ಮಹಾರಾಷ್ಟ್ರದ ಶಾಸಕರನ್ನು ಸುರಕ್ಷಿತವಾಗಿ ಕಾಪಾಡಿ, ಮಹಾರಾಷ್ಟ್ರಕ್ಕೆ ಕರೆದೊಯ್ದು, ದೇಶ್ ಮುಖ್ ಸರ್ಕಾರವನ್ನು ಉಳಿಸಿದ್ರು.

2017 ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಆಪ್ತ ಅಹಮದ್ ಪಟೇಲ್ ರನ್ನು ಸೋಲಿಸಲು ಮೋದಿ ಮತ್ತು ಅಮಿತ್ ಶಾ ತುಂಬಾ ಪ್ರಯತ್ನಿಸಿದ್ರು. ಆಗ ಕೈ ಶಾಸಕರನ್ನು ಕಾಪಾಡಿ, ಅಹಮದ್ ಪಟೇಲ್ ಗೆಲ್ಲುವಂತೆ ಮಾಡಿದ್ದು ಇದೇ ಡಿಕೆಶಿ.

ಡಿಕೆಶಿ ಅಂತಾನೇ ಕರೆಯಲ್ಪಡುವ ಇವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ರಕ್ಷಕರಾಗಿದ್ದಾರೆ. ಎಚ್. ಡಿ. ದೇವೇಗೌಡ ಮತ್ತು ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿಯೊಂದಿಗೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ರೂ, ಅದನ್ನೆಲ್ಲಾ ಬದಿಗಿಟ್ಟು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ರಚನೆಗೆ ಮುಂದಾಗಿದ್ದಾರೆ.

ಡಿ.ಕೆ.ಶಿವಕುಮಾರ್ 1989 ರಲ್ಲಿ ಅಂದ್ರೆ, ಅವರಿಗೆ ಕೇವಲ 29 ವರ್ಷವಾಗಿದ್ದಾಗ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ರು. 2013 ರಲ್ಲಿ ಇವರು 589 ಕೋಟಿ ರೂಪಾಯಿ ಆಸ್ತಿ ಹೊಂದುವ ಮೂಲಕ ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...