alex Certify
ಕನ್ನಡ ದುನಿಯಾ       Mobile App
       

Kannada Duniya

ಭಿನ್ನಮತಕ್ಕೆ ಮಣಿದ ಕಾಂಗ್ರೆಸ್ ಹೈಕಮಾಂಡ್: ಎಂ.ಬಿ. ಪಾಟೀಲರಿಗೆ ಬುಲಾವ್

ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟ ರಚನೆಯಾದ ಬಳಿಕ ಭುಗಿಲೆದ್ದಿರುವ ತಮ್ಮ ಪಕ್ಷದ ಶಾಸಕರುಗಳ ಅಸಮಾಧಾನಕ್ಕೆ ಮಣಿದಿರುವ ಕಾಂಗ್ರೆಸ್ ಹೈಕಮಾಂಡ್, ಮಾತುಕತೆಗೆಂದು ಅತೃಪ್ತ ಶಾಸಕರ ನೇತೃತ್ವ ವಹಿಸಿಕೊಂಡಿರುವ ಮಾಜಿ ಸಚಿವ ಎಂ.ಬಿ. ಪಾಟೀಲರನ್ನು ದೆಹಲಿಗೆ ಕರೆಸಿಕೊಂಡಿದೆ.

ಈಗಾಗಲೇ ದೆಹಲಿ ತಲುಪಿರುವ ಎಂ.ಬಿ. ಪಾಟೀಲ್ ಖಾಸಗಿ ಹೊಟೇಲ್ ನಲ್ಲಿ ತಂಗಿದ್ದು, ಬೆಳಿಗ್ಗೆ ಪಕ್ಷದ ವರಿಷ್ಠರನ್ನು ಭೇಟಿಯಾಗಲಿದ್ದಾರೆಂದು ತಿಳಿದು ಬಂದಿದೆ. ಹೈಕಮಾಂಡ್ ಜೊತೆ ಚರ್ಚಿಸಬೇಕಾಗಿರುವ ವಿಷಯಗಳನ್ನು ಅತೃಪ್ತ ಶಾಸಕರ ಜೊತೆಗೆ ಸಮಾಲೋಚನೆ ನಡೆಸಿಯೇ ಬಂದಿರುವ ಎಂ.ಬಿ. ಪಾಟೀಲ್ ಈ ಎಲ್ಲರ ಭಾವನೆಗಳನ್ನು ಹಂಚಿಕೊಳ್ಳಲಿದ್ದಾರೆ.

ಒಂದೊಮ್ಮೆ ತಮಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಮುಂದಾದರೂ ಅದನ್ನು ಒಪ್ಪಿಕೊಳ್ಳದಿರಲು ಎಂ.ಬಿ. ಪಾಟೀಲ್ ತೀರ್ಮಾನಿಸಿದ್ದು, ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ಮಾತ್ರ ಸಚಿವ ಸ್ಥಾನ ಪಡೆಯಲು ನಿರ್ಧರಿಸಿದ್ದಾರೆನ್ನಲಾಗಿದೆ. ಅದರಲ್ಲೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ವಿರುದ್ಧ ಬಹುತೇಕ ಅತೃಪ್ತ ಶಾಸಕರು ಸಿಡಿದು ನಿಂತಿದ್ದು, ಇದೆಲ್ಲ ವಿಚಾರವನ್ನು ಎಂ.ಬಿ. ಪಾಟೀಲ್ ವರಿಷ್ಠರೊಂದಿಗಿನ ಮಾತುಕತೆ ವೇಳೆ ವಿವರಿಸುವ ಸಾಧ್ಯತೆಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...