alex Certify
ಕನ್ನಡ ದುನಿಯಾ       Mobile App
       

Kannada Duniya

ಕಲಾಗ್ರಾಮದಲ್ಲಿ ‘ಮಾಯಾ ಸರೋವರ’ ದ ಯಶಸ್ವಿ ಪ್ರದರ್ಶನ

12919230_858165120961038_1502302663_n

ಮೂರ್ಖರ ಪೆಟ್ಟಿಗೆಗೆ ಮಾರು ಹೋಗುತ್ತಿರುವ ಆಧುನಿಕ ಜಗತ್ತಿನಲ್ಲಿ ನಾಟಕ ಪ್ರದರ್ಶನದ ಮೂಲಕ ಹೊಸ ಸಂದೇಶವನ್ನು ನೀಡುವುದರ ಜತೆಗೆ ಕಲೆಯ ಉಳಿವಿಗಾಗಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ‘ರಂಗ ಸೌಗಂಧ’ ತನ್ನ ‘ಮಾಯಾ ಸರೋವರ’ ನಾಟಕ ಪ್ರದರ್ಶನದ ಮೂಲಕ ಬೆಂಗಳೂರಿನ ಪ್ರೇಕ್ಷಕರಿಗೆ ರಸದೌತಣ ನೀಡಿತು.

ಶನಿವಾರ ರಾಜ್ಯ ರಾಜಧಾನಿ ಬೆಂಗಳೂರಿನ ಕಲಾಗ್ರಾಮ ಮಲ್ಲತ್ತಹಳ್ಳಿಯಲ್ಲಿ ‘ವಿಶ್ವರಂಗಭೂಮಿ ದಿನಾಚರಣೆ’ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನಾಟಕೋತ್ಸವದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಎದುರಿನಲ್ಲಿ ‘ರಂಗ ಸೌಗಂಧ’ ತಂಡ ‘ಮಾಯಾ ಸರೋವರ’ ನಾಟಕವನ್ನು ಅತ್ಯಂತ ಯಶಸ್ವಿಯಾಗಿ ಪ್ರದರ್ಶಿಸಿತು.

ಮನುಷ್ಯ ತನ್ನ ಜೀವನದಲ್ಲಿ ಯಾವ ರೀತಿ ‘ಮಾಯೆ’ಗೆ ಒಳಗಾಗಿ ಬದಲಾವಣೆ ಹೊಂದುತ್ತಾನೆ ಎಂಬುದನ್ನು ಅತ್ಯಂತ ಸೊಗಸಾಗಿ ಚಿತ್ರಿಸಿರುವ ಕಥೆ, ಅದಕ್ಕೆ ಪೂರಕವಾಗಿ ಸಂಗೀತ, ಬಹು ಮುಖ್ಯವಾಗಿ ಭಾವನೆಗಳನ್ನು ಕಲಾವಿದರು ಅತ್ಯಂತ ಮನೋಜ್ಞವಾಗಿ ಬಿಂಬಿಸುವ ಮೂಲಕ ಪ್ರೇಕ್ಷಕರ ಮನಗೆಲ್ಲಲು ಯಶಸ್ವಿಯಾದರು.

ಗಣಪತಿ ಹೆಗಡೆ ಹುಲಿಮನೆ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕವನ್ನು ಕೋಡನಮನೆಯ ಶ್ರೀಪಾದ ಹೆಗಡೆ, ನಾಗಪತಿ ಭಟ್ಟ ವಡ್ಡಿನಗದ್ದೆ, ರಾಜಾರಾಂ ಭಟ್ ಹೆಗ್ಗಾರಳ್ಳಿ ಸೇರಿದಂತೆ ಹಲವು ಕಲಾವಿದರು ತಮ್ಮ ಅಭಿನಯದ ಮೂಲಕವೇ ‘ಮಾಯಾ ಸರೋವರ’ ದ ರಹಸ್ಯವನ್ನು ತೆರೆದಿಟ್ಟಿದ್ದು ವಿಶೇಷವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...