alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವುದೇ ಲೆಕ್ಕವನ್ನಾದರೂ ಕ್ಷಣಾರ್ಧದಲ್ಲೇ ಹೇಳ್ತಾನೆ ಈ ವಿದ್ಯಾರ್ಥಿ

ಗಣಿತ ಅಂದರೆ ಹಲವರಿಗೆ ತಲೆನೋವು ತರಿಸುವ ವಿಷಯ, ಕೆಲವರಿಗೆ ಕಬ್ಬಿಣದದ ಕಡಲೆ, ಇನ್ನು ಬಹಳಷ್ಟು ಮಂದಿಗೆ ಅದೊಂದು ಕುತೂಹಲಭರಿತವಾದ ಆಟ.. ಆದರೆ ಕೋಟೆ ನಾಡಿನ ಈ ವಿದ್ಯಾರ್ಥಿಗೆ ಗಣಿತ ಎಂದರೆ ಅರಳು ಹುರಿದಂತೆ ಸುಲಭ-ಸುಲಲಿತ….

ಹೌದು, ಚಿತ್ರದುರ್ಗದ ಬ್ಯಾಂಕ್ ಕಾಲೋನಿಯ ವಿದ್ಯಾರ್ಥಿ ಸಿದ್ಧಾರ್ಥ್ ಅವರಿಗೆ ಗಣಿತ ಎಂದರೆ ಎಲ್ಲಿಲ್ಲದ ಆಸಕ್ತಿ. ಯಾವುದೇ ಲೆಕ್ಕವನ್ನಾದರೂ ಕ್ಷಣಾರ್ಧದಲ್ಲಿ ಹೇಳಿ ಬಿಡುವಷ್ಟು ಚಾಕಚಕ್ಯತೆ. 6,000 ಮಗ್ಗಿವರೆಗೆ ಏನೇ ಕೇಳಿದರೂ ಫಟ್ ಅಂತ ಹೇಳಿಬಿಡುವ ಕೌಶಲ್ಯ.

ಹ್ಯಾಪಿ ಹೋಮ್ ಸ್ಕೂಲ್ ಮುಖ್ಯಸ್ಥರು ಹಾಗೂ ಶಿಕ್ಷಕಿಯಾಗಿರೋ ಮಾಲಾ ಅವರ ಪುತ್ರ ಈ ಸಿದ್ಧಾರ್ಥ್. ಇವರಿಗೆ ಚಿಕ್ಕಂದಿನಿಂದಲೂ ಗಣಿತದ ಬಗ್ಗೆ ಅದೇನೋ ಕುತೂಹಲ. ಸಿದ್ಧಾರ್ಥ್ 6 ವರ್ಷದವನಿದ್ದಾಗಲೇ ಅಬ್ಯಾಕಸ್ ನಲ್ಲಿ ತುಂಬಾ ಫಾಸ್ಟ್ ಆಗಿದ್ದರು. ಅಂದು ವಿದ್ಯಾರ್ಥಿಯೊಬ್ಬ 100 ರ ಮಗ್ಗಿ ಹೇಳುವುದು ನೋಡಿ ಆಕರ್ಷಿತನಾಗಿದ್ದ ಸಿದ್ಧಾರ್ಥ್ ತಾನೂ ವಾರದೊಳಗೆ 500 ವರೆಗೆ ಮಗ್ಗಿ ಹೇಳಲು ಕಲಿತರಂತೆ.

ಈಗ ಖುದ್ದಾಗಿ 2 ರಿಂದ 6,000 ದವರೆಗಿನ ಮಗ್ಗಿಯನ್ನು ಸುಲಭವಾಗಿ ಬರೆಯಬಲ್ಲ ವಿಧಾನವನ್ನು ಸಹ ಕಂಡು ಹಿಡಿದಿದ್ದಾರೆ. ಈ ವಿಧಾನಕ್ಕೆ ’ಟಿಕ್ ಟ್ಯಾಕ್ ಟೂ’ ಅಂತ ಹೆಸರಿಟ್ಟಿದ್ದು, ಎರಡು ಟೇಬಲ್ ಹಾಕಿ ಮಗ್ಗಿಯನ್ನು ವಿಸುವಲೇಸೇಷನ್ ನಲ್ಲಿ ಸುಲಭವಾಗಿ ಕಲಿಯುವ ವಿಧಾನ ಇದಾಗಿದೆ.

ಈ ಟಿಕ್ ಟ್ಯಾಕ್ ವಿಧಾನವನ್ನು ತಮ್ಮ ಹ್ಯಾಪಿ ಹೋಂ ಶಾಲೆ ವಿದ್ಯಾರ್ಥಿಗಳಿಗೂ ಹೇಳಿ ಕೊಡುತ್ತಿದ್ದಾರೆ. ಸಿದ್ಧಾರ್ಥ್ ರ ಈ ಬೌದ್ಧಿಕ ಕೌಶಲ್ಯ ನಿಜಕ್ಕೂ ಮೆಚ್ಚುವಂತದ್ದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...