alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕ ನ್ಯಾಯಾಲಯ ನೀಡಿದೆ ಈ ‘ಮಹತ್ವ’ದ ತೀರ್ಪು

ಹೆರಿಗೆ ಸೌಲಭ್ಯ ಪಡೆದುಕೊಳ್ಳುವುದು ಮಗು ಬದುಕುಳಿದರಷ್ಟೇ ಅಲ್ಲ, ಆ ತಾಯಿಗೆ ಸಿಗಬೇಕಾದ ಸೌಲಭ್ಯ ಸಿಗಲೇ ಬೇಕು ಎಂದು ಗ್ರಾಹಕ ನ್ಯಾಯಾಲಯ ವಿಮಾ ಕಂಪೆನಿಗೆ ನಿರ್ದೇಶನ ನೀಡಿದೆ.

ಐದು ವರ್ಷದ ದೀರ್ಘಾವಧಿ ಹೋರಾಟದ ಬಳಿಕ ಮಹಿಳೆಯೊಬ್ಬರು ಈ ಪ್ರಕರಣದಲ್ಲಿ ನ್ಯಾಯ ಪಡೆದುಕೊಂಡಿದ್ದಾರೆ.

ವಿಪ್ರೋ ಕಂಪೆನಿಯಲ್ಲಿ ಉದ್ಯೋಗಿಯಾದ ಮಹಿಳೆ, 2013ರಲ್ಲಿ ಗರ್ಭಿಣಿಯಾಗಿದ್ದರು. ಆದರೆ, 23 ವಾರಗಳ ಬಳಿಕ ಅವಳಿ ಜವಳಿ ಮಕ್ಕಳ ಸ್ಥಿತಿಯಲ್ಲಿದ್ದ ಭ್ರೂಣ ತೆಗೆಯುವ ಸಂದರ್ಭ ಎದುರಾಯಿತು. ಚೆನ್ನೈನ ಆಸ್ಪತ್ರೆ ವೈದ್ಯರ ಸಲಹೆಯಂತೆ ಭ್ರೂಣ ತೆಗೆಯಲಾಯಿತು.

ಭ್ರೂಣ ತೆಗೆಯದಿದ್ದರೆ ತಾಯಿಯ ಮೂತ್ರಪಿಂಡ ಸಮಸ್ಯೆಯಾಗಬಹುದೆಂದು ಎಚ್ಚರಿಸಿದ್ದರಲ್ಲದೇ, ಕೋಮಾಗೆ ಹೋಗಬಹುದು ಎಂದಿದ್ದರು. ಈ ಕಾರಣಕ್ಕೆ ಭ್ರೂಣ ತೆಗೆಯಲಾಗಿತ್ತು.

ತನ್ನ ಕಂಪೆನಿಯ ಆರೋಗ್ಯ ವಿಮಾ ಸೇವೆ ಬಳಸಿಕೊಳ್ಳಲು ಮುಂದಾದ ಆಕೆ, ಬಿಲ್ ಗಳನ್ನು ವಿಮಾ ಕಂಪೆನಿಗೆ ಸಲ್ಲಿಸಿದರು. ವಿಮಾ ಕಂಪೆನಿ ಪೂರ್ಣ ಬಿಲ್ ಮರುಪಾವತಿ ಮಾಡಲು ನಿರಾಕರಿಸಿತು. ಕೇವಲ 24,313 ರೂ. ನೀಡಿ, 97,028 ಹಣ ಕೊಡಲು ಸಾಧ್ಯವಿಲ್ಲವೆಂದಿತು. ಮಗು ಜನಿಸಲಿಲ್ಲ, ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ಎಂದು ವಾದ ಮಾಡಿತು.

ಕೊನೆಗೆ ಮಹಿಳೆ, ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದರು. ಬರೋಬ್ಬರಿ 4 ವರ್ಷ 10 ತಿಂಗಳ ಬಳಿಕ ತೀರ್ಪು ಬಂದಿದ್ದು, ಮಗು ಜನಿಸಲಿಲ್ಲ ಎಂಬ ಕಾರಣಕ್ಕೆ ಸೌಲಭ್ಯ ಕಲ್ಪಿಸಲು ನಿರಾಕರಿಸುವುದು ಸರಿಯಲ್ಲ ಎಂದು ತೀರ್ಪು ನೀಡಿ ಬಿಲ್ ನ ಪೂರ್ಣ ಹಣ ಮರುಪಾವತಿ ಮಾಡುವಂತೆ ಆದೇಶ ನೀಡಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...