alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಮತ್ತೊಬ್ಬ ಸ್ವಾಮೀಜಿಯ ರಾಸಲೀಲೆ…?

ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರು ಮದ್ದೇವಣಾಪುರ ಮಠದಲ್ಲಿ ನಡೆದ ರಾಸಲೀಲೆ ಪ್ರಕರಣ ಬಯಲಾಗಿ ಅವಾಂತರ ಸೃಷ್ಠಿಸಿತ್ತು. ಇದೀಗ ಮತ್ತೊಬ್ಬ ಸ್ವಾಮೀಜಿಯ ರಾಸಲೀಲೆ ಪ್ರಕರಣ ಬಯಲಾಗಿದೆ.

ಬಳ್ಳಾರಿ ಜಿಲ್ಲೆಯ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರ ಕಾರು ಚಾಲಕನಾಗಿರುವ ಮಲ್ಲಯ್ಯ ಎಂಬುವವರು ಸ್ವಾಮೀಜಿ ರಾಸಲೀಲೆಯನ್ನು ಬಯಲು ಮಾಡಿದ್ದಾರೆ.

ಕಳೆದ 20 ವರ್ಷಗಳಿಂದ ಸ್ವಾಮೀಜಿ ಬಳಿ ಸೇವಕರಾಗಿ, ಕಾರು ಚಾಲಕರಾಗಿ ಸ್ವಾಮೀಜಿ ಬಳಿ ಕೆಲಸ ಮಾಡುತ್ತಿರುವ ಮಲ್ಲಯ್ಯ, ಸ್ವಾಮಿಯ ಸೂಚನೆಯಂತೆ ಮಹಿಳೆಯರನ್ನು ಕರೆದುಕೊಂಡು ಬರುತ್ತಿದ್ದುದಾಗಿ ಹೇಳಿದ್ದಾರೆ.

ಸ್ವಾಮೀಜಿ ಹಲವು ಹೆಣ್ಣುಮಕ್ಕಳೊಂದಿಗೆ ರಾಸಲೀಲೆ ನಡೆಸಿದ್ದಾರೆ. ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ ಮೊದಲಾದ ಕಡೆಗಳಲ್ಲಿ ಸ್ವಾಮೀಜಿ ರಾಸಲೀಲೆ ನಡೆಸಿದ್ದಾಗಿ ಮಲ್ಲಯ್ಯ ಆರೋಪಿಸಿದ್ದಾರೆ.

ಸ್ವಾಮೀಜಿ ಕೃತ್ಯಕ್ಕೆ ಇಷ್ಟು ದಿನ ಬೆಂಬಲ ನೀಡಿದ್ದ ಮಲ್ಲಯ್ಯ, ಹೀಗೆ ಮಾಡದಂತೆ ಹೇಳಿದ್ದಕ್ಕೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ಬೆದರಿಕೆ ಹಾಕಲಾಗಿದೆ. ಮನಸ್ಸಿಗೆ ನೋವಾದರೂ ಕೆಲಸದ ಕಾರಣದಿಂದ ಅವರಿಗೆ ಸಹಕಾರ ನೀಡಿದ್ದಾಗಿ ಮಲ್ಲಯ್ಯ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...