alex Certify
ಕನ್ನಡ ದುನಿಯಾ       Mobile App
       

Kannada Duniya

ನಟರ ಶವಗಳಿಗಾಗಿ ಮುಂದುವರೆದ ಶೋಧ ಕಾರ್ಯ

dd-nir

ಬೆಂಗಳೂರು: ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ಸಾವನ್ನಪ್ಪಿರುವ ‘ಮಾಸ್ತಿಗುಡಿ’ ಚಿತ್ರದ ಕಲಾವಿದರಾದ ಅನಿಲ್ ಮತ್ತು ಉದಯ್ ಅವರ ಶವಗಳ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಎನ್.ಡಿ.ಆರ್.ಎಫ್. ತಂಡದಿಂದ ಸತತವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, 100 ಅಡಿ ಆಳದವರೆಗೆ ಮುಳುಗು ತಜ್ಞರು ಹುಡುಕಾಟ ನಡೆಸಿದ್ದಾರೆ. ಅನಿಲ್ ಮತ್ತು ಉದಯ್ ಹೆಲಿಕಾಪ್ಟರ್ ನಿಂದ ಹಾರಿದ ಸ್ಥಳದಲ್ಲಿ ಭಾರೀ ಆಳವಿದ್ದು, ಮುಳುಗುತಜ್ಞರು ಆಕ್ಸಿಜನ್, ಕ್ಯಾಮೆರಾಗಳೊಂದಿಗೆ ಹುಡುಕಾಟ ನಡೆಸಿದ್ದಾರೆ. ಮಂಗಳೂರಿನಿಂದ ಆಗಮಿಸಿರುವ ಈಜುತಜ್ಞರು ಮಾಹಿತಿ ಪಡೆದುಕೊಂಡು ನಟರು ಬಿದ್ದ ಸ್ಥಳದ 50 ಮೀಟರ್ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದಾರೆ.

ನಟ ‘ದುನಿಯಾ’ ವಿಜಯ್ ಸ್ಥಳದಲ್ಲೇ ಇದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿರುವ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ. ನಾಗಶೇಖರ್ ನಿರ್ದೇಶನದ  ‘ಮಾಸ್ತಿಗುಡಿ’  ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿ ಅವಘಡ ಸಂಭವಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...