alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ನಿಲ್ಲಲು ಕಾರಣವಾಗಿದ್ದ ‘ಪ್ರೇಮ ಪ್ರಕರಣ’ ಸುಖಾಂತ್ಯ

ಭಾನುವಾರದಂದು ನೆಲಮಂಗಲದ ವಿಶ್ವ ಶಾಂತಿ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭ, ವಧುವಿನ ಪ್ರಿಯಕರ ದಿಢೀರ್ ಎಂಟ್ರಿ ಕೊಟ್ಟಿದ್ದ ಕಾರಣ ರದ್ದಾಗಿತ್ತು.

ಪ್ರಿಯಕರ ಬರುತ್ತಿದ್ದಂತೆಯೇ ವಧು, ತಾನು ಮದುವೆಯಾಗುವುದಿದ್ದರೆ ಆತನನ್ನೇ ಎಂದು ಹೇಳಿ ವರನಿಂದ ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿ ಮಂಟಪದಿಂದ ಹೊರ ಬಂದಿದ್ದಳು. ಕಡೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ಪೊಲೀಸರ ಸಮ್ಮುಖದಲ್ಲಿ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಇದೀಗ ಪ್ರೇಮಿಗಳ ವಿವಾಹವನ್ನು ನೆಲಮಂಗಲ ಪಟ್ಟಣದ ಗಣೇಶನ ಗುಡಿಯಲ್ಲಿ ಸ್ನೇಹಿತರು ಹಾಗೂ ಕೆಲ ಸಂಬಂಧಿಗಳ ಸಮ್ಮುಖದಲ್ಲಿ ನೆರವೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...