alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ಯುವರಾಜ

MYS-YADUVEER-JODI-696x513

ಕಳೆದ ವರ್ಷವಷ್ಟೇ ಮೈಸೂರು ಆಸ್ಥಾನದ ಗದ್ದುಗೆ ಏರಿದ್ದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸದ್ಯದಲ್ಲಿಯೇ ಗೆಳತಿ ತ್ರಿಷಿಕಾರನ್ನು ವರಿಸಲಿದ್ದು, ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.

ಮೈಸೂರಿನ ಅರಮನೆಯ ಕಲ್ಯಾಣ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ನಡೆಯಲಿದೆ ಎನ್ನಲಾಗುತ್ತಿದ್ದು, ಕೆಲ ಮಾಹಿತಿಗಳ ಪ್ರಕಾರ ಮೇ 8 ಅಥವಾ 18 ರಂದು ಯದುವೀರ್ ಅವರ ವಿವಾಹ ನೆರವೇರಲಿದೆ. ಈಗಾಗಲೇ ಇವೆರಡು ದಿನಾಂಕದಲ್ಲಿ ಒಂದನ್ನು ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠದ ಜಗದ್ಗುರುಗಳು ಸೂಚಿಸಲಿದ್ದು, ಅದೇ ದಿನ ವಿವಾಹ ಕಾರ್ಯಕ್ರಮ ನೆರವೇರಲಿದೆ.

ಸ್ವರೂಪ್ ಆನಂದ್ ಗೋಪಾಲ್ ದಾಸ್ ಮತ್ತು ತ್ರಿಪುರ ಸುಂದರ ದೇವಿ ಮಗನಾದ ಯದುವೀರ್ ಅವರನ್ನು ಕಳೆದ ವರ್ಷ ಫೆ.23 ರಂದು ಯದುವಂಶದ ಉತ್ತರಾಧಿಕಾರಿಯಾಗಿ ದತ್ತು ಸ್ವೀಕರಿಸಲಾಗಿತ್ತು. ಅಲ್ಲದೇ ದತ್ತು ಸ್ವೀಕಾರ ಸಮಯದಲ್ಲಿಯೂ ತ್ರಿಷಿಕಾ ಕಾಣಿಸಿಕೊಂಡಿದ್ದರು. ಇದೀಗ ಸದ್ಯದಲ್ಲಿಯೇ ಇವರಿಬ್ಬರ ವಿವಾಹ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಿದ್ದತೆಗಳನ್ನು ಆರಂಭಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...