alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಷಕರ ವಿರೋಧಕ್ಕೆ ಫೇಸ್ ಬುಕ್ ಲೈವ್ ನಲ್ಲಿಯೇ ಮದುವೆಯಾದ್ರು ಪ್ರೇಮಿಗಳು

ತುಮಕೂರು ಮೂಲದ ಪ್ರೇಮಿಗಳಿಬ್ಬರು ತಮ್ಮ ವಿವಾಹಕ್ಕೆ ತಂದೆ-ತಾಯಿಗಳು ಒಪ್ಪುತ್ತಿಲ್ಲವೆಂದು ದೇವಾಲಯದಲ್ಲಿ ಫೇಸ್ ಬುಕ್ ಲೈವ್ ಮೂಲಕ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೆ.ಆರ್. ಬಡಾವಣೆ ನಿವಾಸಿಗಳಾದ ಕಿರಣ್ (25) ಮತ್ತು ಅಂಜನಾ (19) ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರಿಂದ ಬೇರೇ ದಾರಿ ಕಾಣದ ಪ್ರೇಮಿಗಳಿಬ್ಬರೂ ಊರಿನಿಂದ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿನ ಹೆಸರುಘಟ್ಟ ಬಳಿಯ ಶಿವನ ದೇವಸ್ಥಾನದಲ್ಲಿ ಗೆಳೆಯರ ಸಮ್ಮುಖದಲ್ಲಿ ವಿವಾಹವಾಗಿದ್ದು, ವಿವಾಹವಾಗಿರುವುದನ್ನು ಫೇಸ್​ಬುಕ್ ಲೈವ್​ನಲ್ಲಿ ಹಾಕಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಯುವತಿ ನಾನು ಕಾಣೆಯಾಗಿಲ್ಲ. ನಾಲ್ಕು ವರ್ಷಗಳಿಂದ ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ನಮ್ಮ ಪ್ರೀತಿಗೆ ಪಾಲಕರು ವಿರೋಧ ವ್ಯಕ್ತಪಡಿಸಿದ್ದು, ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದೇನೆ. ಪಾಲಕರು ತೊಂದರೆ ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಇನ್ನೆರಡು ದಿನಗಳಲ್ಲಿ ಮಧುಗಿರಿ ಠಾಣೆಗೆ ಹಾಜರಾಗುತ್ತೇವೆ. ನಮಗೆ ರಕ್ಷಣೆ ನೀಡಿ ಎಂದು ಫೇಸ್​ಬುಕ್ ಲೈವ್​ನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...