alex Certify
ಕನ್ನಡ ದುನಿಯಾ       Mobile App
       

Kannada Duniya

ಸೀರೆ ವಿಚಾರಕ್ಕೆ ನಿಶ್ಚಯವಾದ ಮದುವೆಯನ್ನೇ ನಿಲ್ಲಿಸಿದ ವರ

ತುಮಕೂರು: ಸೀರೆ ವೀಚಾರಕ್ಕಾಗಿ ನಿಶ್ಚಯವಾಗಿದ್ದ ಮದುವೆಯೇ ಮುರಿದುಬಿದ್ದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ನಡೆದಿದೆ.

ಅಂದುಕೊಂಡಂತೆ ಆಗಿದ್ದರೆ ಇಂದು ತುರುವೇಕೆರೆಯ ಸುಮಿತ್ ಹಾಗೂ ತುಮಕೂರಿನ ಚಂದ್ರಕಲಾಗೆ ಚಿಲುಮೆ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿತ್ತು. ಆದರೆ ಕ್ಷುಲ್ಲಕ ಕಾರಣಕ್ಕಾಗಿ ನಡೆಯಬೇಕಿದ್ದ ಮದುವೆ ನಿಂತುಹೋಗಿದೆ.

ಜುಲೈ ತಿಂಗಳಿನಲ್ಲಿಯೇ ಸುಮಿತ್ ಹಾಗೂ ತುಮಕೂರಿನ ಚಂದ್ರಕಲಾ ನಿಶ್ಚಿತಾರ್ಥವಾಗಿತ್ತು. ಎರಡು ಕುಟುಂಬದ ಹಿರಿಯರೇ ನೋಡಿ ನಿಶ್ಚಯಿಸಿದ್ದ ಮದುವೆಯದು. ಹೆಣ್ಣಿನ ಮನೆಯವರು ಸಾಕಷ್ಟು ವರದಕ್ಷಿಣೆಯನ್ನೂ ನೀಡಲು ಒಪ್ಪಿದ್ದರು. ಇನ್ನೇನು ವಿವಾಹಕ್ಕಾಗಿ ಸಡಗರದ ಸಿದ್ದತೆಗಳು ನಡೆಯುತ್ತಿತ್ತು,

ಮದುವೆಗೆ 15 ದಿನ ಮೊದಲು ಒಡವೆ-ವಸ್ತ್ರಗಳ ಖರೀದಿಗೆ ಎರಡೂ ಮನೆಯವರು ಹೋಗಿದ್ದಾರೆ. ಈ ವೇಳೆ ಸೀರೆ ಅಂಗಡಿಯಲ್ಲಿ ವರ, ದುಬಾರಿ ಸೀರೆಯನ್ನು ಕೊಡಿಸಬೇಕೆಂದು ಬೇಡಿಕೆಯಿಟ್ಟಿದ್ದಾನೆ. ಅಷ್ಟೊಂದು ದುಬಾರಿ ಸೀರೆ ಖರೀದಿ ಮಾಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಚಂದ್ರಕಲಾ ಪೋಷಕರು ಹೇಳಿದ್ದಾರೆ. ಹೀಗೆ ಸೀರೆ ವಿಷಯವಾಗಿ ಆರಂಭವಾದ ಜಗಳ ಪರಸ್ಪರ ಎರಡು ಕುಟುಂಬಗಳ ಮನಸ್ತಾಪಕ್ಕೆ ಕಾರಣವಾಗಿ, ವರ ಸುಮಿತ್ ಮದುವೆಯನ್ನೇ ನಿಲ್ಲಿಸಿದ್ದಾನೆ.

ಇದರಿಂದ ನೊಂದ ವಧು ಚಂದ್ರಕಲಾ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರ ಸುಮಿತ್ ವಿರುದ್ಧ ದೂರು ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...