alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಡಗಿನ ನಿರಾಶ್ರಿತರ ಕೇಂದ್ರದಲ್ಲಿಂದು ವಿವಾಹ ಸಂಭ್ರಮ

ಮಡಿಕೇರಿ: ಭಾರೀ ಮಳೆ, ಭೀಕರ ಪ್ರವಾಹಕ್ಕೆ ತುತ್ತಾಗಿ ಮನೆ-ಮಠಗಳನ್ನು ಕಳೆದುಕೊಂಡಿರುವ ಕೊಡಗು ಜನತೆಯ ಸಂಕಷ್ಟ ಹೇಳತೀರದು. ಜಿಲ್ಲೆಯ ಅದೆಷ್ಟೋ ಕುಟುಂಬಗಳು ಪ್ರವಾಹಕ್ಕೆ ಸಿಲುಕಿ ಅಕ್ಷರಶಃ ಬೀದಿ ಪಾಲಾಗಿವೆ. ನಡೆಯಬೇಕಿದ್ದ ಅದೆಷ್ಟೋ ಮದುವೆಗಳು ನಿಂತು ಹೋಗಿವೆ. ಈ ಸಂದರ್ಭದಲ್ಲಿ ಇಂದು ಕೊಡಗಿನ ನಿರಾಶ್ರಿತರ ಕೇಂದ್ರದಲ್ಲಿ ವಿವಾಹದ ಸಡಗರ.

ಮಳೆ ಅವಾಂತರಕ್ಕೆ ತುತ್ತಾದ ಹಿನ್ನಲೆಯಲ್ಲಿ ಮಕ್ಕೋಡ್ಲುವಿನ ಮಂಜುಳಾ ಹಾಗೂ ರಂಜಿತಾ ಎಂಬ ಯುವತಿಯರ ಮದುವೆಗಳು ರದ್ದಾಗುವ ಸ್ಥಿತಿಯಲ್ಲಿದ್ದವು. ಅಗಸ್ಟ್ 26 ಕ್ಕೆ ನಿಗದಿಯಾಗಿದ್ದ ಮಂಜುಳ ಮದುವೆ ಇನ್ನೇನು ನಿಂತು ಹೋಗುವುದರಲ್ಲಿತ್ತು. ಸೆಪ್ಟೆಂಬರ್ 12 ಕ್ಕೆ ರಂಜಿತಾ ವಿವಾಹ ನಿಗದಿಯಾಗಿತ್ತು. ಮದುವೆ ತಯಾರಿಯಲ್ಲಿದ್ದ ಕುಟುಂಬ ನೆರೆ ಪ್ರವಾಹಕ್ಕೆ ಸಿಲುಕಿ, ಮನೆ ಕುಸಿದು ಕುಟುಂಬದವರೆಲ್ಲ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ವಿವಿಧ ಸಂಘಟನೆಗಳು ಹಾಗೂ ಸರ್ಕಾರದ ನೆರವಿನ ಹಸ್ತದಿಂದ ರದ್ದಾಗಿದ್ದ ಈ ಮದುವೆಗಳು ಇಂದು ನಿರಾಶ್ರಿತರ ಕೇಂದ್ರದಲ್ಲಿಯೇ ಸರಳವಾಗಿ ನಡೆದಿದೆ.

ಪ್ರವಾಹದಿಂದ ಜೀವನವನ್ನೇ ಕಳೆದುಕೊಂಡ ಕುಟುಂಬಗಳು ಇಂದು ಹಲವರ ಸಹಾಯದಿಂದ ತಮ್ಮ ಸಂಕಷ್ಟವನ್ನು ಮರೆತು ಈ ಮದುವೆ ಸಮಾರಂಭದಲ್ಲಿ ಭಾಗಿಯಾದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...