alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಕಾರ್ಡ್ ನೀಡುವ ನೆಪದಲ್ಲಿ ಮನೆ ದರೋಡೆ

ಅಣ್ಣನ ಮದುವೆ ಕಾರ್ಡ್ ನೀಡುವ ನೆಪದಲ್ಲಿ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಗೇ ಸಂಗಡಿಗರೊಂದಿಗೆ ನುಗ್ಗಿದವನೊಬ್ಬ ಚಾಕುವಿನಿಂದ ಇರಿದು ನಗ-ನಗದು ದೋಚಿರುವ ಘಟನೆ ನಡೆದಿದೆ.

ಹಾಸನದ ಕುವೆಂಪು ಬಡಾವಣೆ ನಿವಾಸಿ ವಾಗೀಶ್ ರ ಮನೆಗೆ ನುಗ್ಗಿದ ಇಮ್ರಾನ್ ಮತ್ತಾತನ ಸಹಚರರು ವಾಗೀಶ್ ಮತ್ತವರ ಪತ್ನಿ ಸಾವಿತ್ರಿಯವರಿಗೆ ಚಾಕುವಿನಿಂದ ಇರಿದು 3 ಲಕ್ಷ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಇಮ್ರಾನ್ ಈ ಹಿಂದೆ ವಾಗೀಶ್ ರ ಬಳಿ ಕೆಲಸಕ್ಕಿದ್ದನೆಂದು ಹೇಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬಡಾವಣೆ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...