alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯಕ್ಕಿಲ್ಲ ಮಂತ್ರಿ ಮಾಲ್ ರೀ ಓಪನ್

Karnataka : Bengaluru : 17/01/2017 : Mantri Square Mall at Malleswaram remain closed after a portion of its roof collapsed on 17 January 2017. Photo : V Sreenivasa Murthy

ಕಟ್ಟಡದ ಒಂದು ಭಾಗ ಕುಸಿದಿದ್ರಿಂದ ಕಳೆದ ಜನವರಿ 17ರಿಂದ್ಲೂ ಬೆಂಗಳೂರಿನ ಮಂತ್ರಿ ಮಾಲ್ ಗೆ ಬೀಗ ಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಹೌಸ್ ಕೀಪಿಂಗ್ ಸಿಬ್ಬಂದಿ ಕೂಡ ಗಾಯಗೊಂಡಿದ್ದರು. ಸದ್ಯಕ್ಕಂತೂ ಮಂತ್ರಿ ಪುನರಾರಂಭವಾಗುವ  ಲಕ್ಷಣಗಳಿಲ್ಲ, ಗ್ರಾಹಕರು ಇನ್ನೊಂದಷ್ಟು ದಿನ ಕಾಯಲೇಬೇಕು.

ಯಾಕಂದ್ರೆ ತಜ್ಞರ ಸಮಿತಿ ಮಂತ್ರಿ ಮಾಲ್ ಗೆ ತಕ್ಷಣಕ್ಕೆ ಆಕ್ಯುಪೆನ್ಸಿ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಮಾಲ್ ಸಂಪೂರ್ಣ ಸುರಕ್ಷಿತ ಎಂದು ಖಚಿತವಾದ ಬಳಿಕವಷ್ಟೆ ಅಧಿಕಾರಿಗಳು ಪ್ರಮಾಣಪತ್ರ ನೀಡಲಿದ್ದಾರೆ. ಕುಸಿದಿರುವ ಕಟ್ಟಡದ ಭಾಗವನ್ನು ಸಂಪೂರ್ಣ ದುರಸ್ತಿ ಮಾಡುವಂತೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಈಗಾಗ್ಲೇ ಸೂಚಿಸಿದ್ದಾರೆ.

ಕುಸಿದ ಕಟ್ಟಡದ ಭಾಗ ಹಾಗೂ ಮೂರು ಮಹಡಿಗಳ ರಿಪೇರಿ ಕಾರ್ಯದ ಅಗತ್ಯದ ಬಗ್ಗೆ ಸಮಿತಿ ಆಯುಕ್ತರಿಗೆ ವರದಿಯೊಂದನ್ನು ನೀಡಿತ್ತು. ಮಂತ್ರಿ ಮಾಲ್ ಗೆ ಪ್ರತಿದಿನ ಸಾವಿರಾರು ಗ್ರಾಹಕರು ಆಗಮಿಸ್ತಾರೆ. ಅವರ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡ ಸ್ಥಿರತೆ ಬಗ್ಗೆ ತಿಳಿದುಕೊಳ್ಳಲು ನಾಲ್ವರು ತಂತ್ರಜ್ಞರ ಸಮಿತಿಯನ್ನು ನೇಮಕ ಮಾಡಲಾಗಿದೆ. ಇವರು ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಬಳಿಕ ಬಿಬಿಎಂಪಿ ಮಂತ್ರಿ ಮಾಲ್ ಗೆ ಪ್ರಮಾಣಪತ್ರ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...